ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವ ಸಂಭ್ರಮ; ವೈಭವ ನೋಡಲು ಕಣ್ಣೆರಡು ಸಾಲದು..!

ಹುಬ್ಬಳ್ಳಿ: ಹುಬ್ಬಳ್ಳಿಯ ಹನ್ನೊಂದನೇ ದಿನ ಗಣಪತಿ ವಿಸರ್ಜನೆ ಆಚರಣೆ ಅಂದರೆ ನಿಜಕ್ಕೂ ಅದೊಂದು ಉತ್ತರ ಕರ್ನಾಟಕದ ಸಂಭ್ರಮದ ಹಬ್ಬವೇ ಸರಿ. ಮುಂಬೈ ಮಾದರಿಯಲ್ಲಿ ಅತಿ ವಿಜೃಂಭಣೆಯಿಂದ ಹುಬ್ಬಳ್ಳಿಯ ಗಣಪತಿ ವಿಸರ್ಜನೆ ನಡೆಯುತ್ತದೆ‌. ಹಾಗಿದ್ದರೇ ಬನ್ನಿ ಹುಬ್ಬಳ್ಳಿಯ ಗಣೇಶೋತ್ಸವ ಮೆರಗನ್ನು ನೋಡಿಕೊಂಡು ಬರೋಣ..

ಎಲ್ಲೆಡೆಯೂ ಡಿಜೆ ಅಬ್ಬರ.. ಕಣ್ಣು ಹಾಯಿಸಿದಷ್ಟೂ ಝಗಮಗಿಸುವ ಲೈಟಿಂಗ್.. ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸುವ ಜನಸಾಗರ. ಇದೆಲ್ಲಾ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ವಾಣಿಜ್ಯನಗರಿ ಹುಬ್ಬಳ್ಳಿ. ಹೌದು.. ಹುಬ್ಬಳ್ಳಿಯಲ್ಲಿ ಹನ್ನೊಂದನೇ ದಿನದ ಗಣಪತಿ ವಿಸರ್ಜನೆ ಮೆರಗು ಎಲ್ಲರನ್ನೂ ಉತ್ಸಾಹದಿಂದ ಕುಣಿದು ಕುಪ್ಪಳಿಸುವಂತೆ ಮಾಡುತ್ತದೆ. ನೂರಕ್ಕೂ ಹೆಚ್ಚು ಗಣಪತಿ ವಿಸರ್ಜನೆ ಅವಳಿನಗರದಲ್ಲಿ ನಡೆಯುತ್ತಿರುವುದು ನಿಜಕ್ಕೂ ವಿಶೇಷವಾಗಿದೆ. ಅದರಲ್ಲೂ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ನಡೆಯುವ ಸಂಭ್ರಮವನ್ನು ನೋಡಲು ಎರಡು ಕಣ್ಣು ಸಾಲದು.

ಇನ್ನೂ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ನಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದ್ದು, ಹುಬ್ಬಳ್ಳಿಯ ಗಣೇಶೋತ್ಸವಕ್ಕೆ ವಿವಿಧ ಮೂಲೆಗಳಿಂದ ಲಕ್ಷಾಂತರ ಜನರು ಆಗಮಿಸುವುದು ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಅಲ್ಲದೇ ಯುವ ಸಮುದಾಯದ ಉತ್ಸಾಹಕ್ಕೆ ಮಾತ್ರ ಕೊನೆಯೇ ಇಲ್ಲದಂತೆ ಹರ್ಷೋದ್ಘಾರದಲ್ಲಿ ಮಿಂದೆದ್ದಿರುವುದು ನಿಜಕ್ಕೂ ವಿಶೇಷವಾಗಿದೆ.

Edited By : Vinayak Patil
Kshetra Samachara

Kshetra Samachara

17/09/2024 10:29 pm

Cinque Terre

60.88 K

Cinque Terre

11

ಸಂಬಂಧಿತ ಸುದ್ದಿ