ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ-ಪುಣೆ-ಬೆಳಗಾವಿ ವಂದೇ ಭಾರತ್​ ರೈಲಿಗೆ ಇಂದು ಪ್ರಧಾನಿ ಮೋದಿ ಚಾಲನೆ

ಬೆಳಗಾವಿ : ಬಹು ನಿರೀಕ್ಷಿತ ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವಿನ ಸಂಪರ್ಕ ಬೆಸೆಯುವ ಪುಣೆ- ಕೊಲ್ಹಾಪುರ- ಬೆಳಗಾವಿ- ಹುಬ್ಬಳ್ಳಿ ವಂದೇ ಭಾರತ್‌ ರೈಲಿಗೆ ಇಂದು ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ.

ಕೊಲ್ಹಾಪುರಕ್ಕೆ ಆಗಮಿಸುವ ಪುಣೆ- ಹುಬ್ಬಳ್ಳಿ ವಂದೇ ಭಾರತ್‌ ರೈಲು ಅಲ್ಲಿಂದ ಬೆಳಗಾವಿಗೆ ಬರಲಿದೆ.

ಎರಡೂ ಕಡೆಗಳಲ್ಲಿ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ರೈಲನ್ನು ಬರ ಮಾಡಿಕೊಳ್ಳಲಿದ್ದಾರೆ. ಈ ರೈಲು ಪ್ರಾಯೋಗಿಕ ಸಂಚಾರ ಶುರುವಾಗಿದ್ದರೂ ಅಧಿಕೃತ ಆರಂಭ ಸೆಪ್ಟಂಬರ್‌ 18ಕ್ಕೆ ಶುರುವಾಗಲಿದೆ. ವಾರದಲ್ಲಿ ಮೂರು ದಿನ ಸಂಚರಿಸುವ ಈ ರೈಲಿನ ಸಂಚಾರದ ವಿವರಗಳನ್ನೂ ಬಿಡುಗಡೆ ಮಾಡಲಾಗಿದೆ.

ಪುಣೆ-ಎಸ್‌ಎಸ್‌ಎಸ್ ಹುಬ್ಬಳ್ಳಿ ಮತ್ತು ಹುಬ್ಬಳ್ಳಿ-ಪುಣೆ ನಡುವೆ ಹೊಸ ವಂದೇ ಭಾರತ್ ರೈಲು ಸೇವೆಗಳು ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡಕ್ಕೂ ರೈಲು ಸಂಪರ್ಕದಲ್ಲಿ ವಿಶೇಷ ಮಹತ್ವವನ್ನು ಪಡೆದುಕೊಂಡಿವೆ. ಪುಣೆ ವಂದೇ ಭಾರತ್ ಎಕ್ಸ್‌ಪ್ರೆಸ್ ಮಹಾರಾಷ್ಟ್ರಕ್ಕೆ 11 ನೇ ವಂದೇ ಭಾರತ್ ರೈಲಾಗಿದ್ದರೆ, ಪುಣೆ-ಎಸ್‌ಎಸ್‌ಎಸ್ ಹುಬ್ಬಳ್ಳಿ ವಂದೇ ಭಾರತ್ ಎಕ್ಸ್‌ಪ್ರೆಸ್ ಕರ್ನಾಟಕಕ್ಕೆ 10 ನೇ ರೈಲಾಗಿದೆ.

ಪುಣೆ- ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ವಿವರ

ಉದ್ಘಾಟನಾ ರೈಲು ಸಂಖ್ಯೆ 02003 ಪುಣೆ-ಎಸ್‌ಎಸ್‌ಎಸ್ ಹುಬ್ಬಳ್ಳಿ ವಂದೇ ಭಾರತ್ ಎಕ್ಸ್‌ಪ್ರೆಸ್ 2024ರ ಸೆಪ್ಟಂಬರ್‌16 ರಂದು ಸಂಜೆ 4.15 ಗಂಟೆಗೆ ಪುಣೆಯಿಂದ ಹೊರಟು ಅದೇ ದಿನ ರಾತ್ರಿ 11.40 ಗಂಟೆಗೆ ಹುಬ್ಬಳ್ಳಿ ತಲುಪಲಿದೆ.

ರೈಲು ಸಂಖ್ಯೆ 20669 ಎಸ್‌ಎಸ್‌ಎಸ್ ಹುಬ್ಬಳ್ಳಿ-ಪುಣೆ ವಂದೇ ಭಾರತ್ ಎಕ್ಸ್‌ಪ್ರೆಸ್ (ತ್ರೈ-ವಾರ) 2024ರ ಸೆಪ್ಟಂಬರ್‌ 18 ರಿಂದ ಜಾರಿಗೆ ಬರುವಂತೆ ಪ್ರತಿ (ಬುಧವಾರ, ಶುಕ್ರವಾರ ಮತ್ತು ಭಾನುವಾರ) ಸಂಚರಿಸಲಿದೆ, ಹುಬ್ಬಳ್ಳಿಯಿಂದ ಬೆಳಗ್ಗೆ 05.00 ಗಂಟೆಗೆ ಹೊರಟು ಅದೇ ದಿನ ಮಧ್ಯಾಹ್ನ 1.30 ಗಂಟೆಗೆ ಪುಣೆ ತಲುಪುತ್ತದೆ.

ರೈಲು ಸಂಖ್ಯೆ 20670 ಪುಣೆ-ಎಸ್‌ಎಸ್‌ಎಸ್ ಹುಬ್ಬಳ್ಳಿ ವಂದೇ ಭಾರತ್ ಎಕ್ಸ್‌ಪ್ರೆಸ್ (ತ್ರೈ-ವಾರ) 2024ರ ಸೆಪ್ಟಂಬರ್‌ 19 ರಿಂದ ರಿಂದ ಜಾರಿಗೆ ಬರುವಂತೆ ಪ್ರತಿ ಗುರುವಾರ, ಶನಿವಾರ ಮತ್ತು ಸೋಮವಾರ ಸಂಚರಿಸಲಿದ್ದು, ಪುಣೆಯಿಂದ ಮಧ್ಯಾಹ್ನ 2.15 ಗಂಟೆಗೆ ಹೊರಟು ಅದೇ ದಿನ ರಾತ್ರಿ 10.45 ಗಂಟೆಗೆ ಹುಬ್ಬಳ್ಳಿ ತಲುಪಲಿದೆ.

ಈ ರೈಲು ಸತಾರಾ, ಸಾಂಗ್ಲಿ, ಮೀರಜ್, ಬೆಳಗಾವಿ ಮತ್ತು ಧಾರವಾಡದಲ್ಲಿ ನಿಲುಗಡೆಯಾಗಲಿದೆ.

ರೈಲಿನ ವಿಶೇಷ

ಪುಣೆ-ಎಸ್‌ಎಸ್‌ಎಸ್ ಹುಬ್ಬಳ್ಳಿ ವಂದೇ ಭಾರತ್ ಎಕ್ಸ್‌ಪ್ರೆಸ್ ತನ್ನ ಹೆಚ್ಚಿನ ವೇಗ ಮತ್ತು ಪ್ರಯಾಣಿಕರ ಸೌಕರ್ಯದಿಂದ ಗಮನ ಸೆಳಯುತ್ತದೆ. ಕೇವಲ 8.5 ಗಂಟೆಗಳಲ್ಲಿ 557 ಕಿಮೀಗಳನ್ನು ಈ ರೈಲು ಕ್ರಮಿಸುತ್ತದೆ, ಇತರ ರೈಲುಗಳಿಗೆ ಹೋಲಿಸಿದರೆ ಸುಮಾರು 3 ಗಂಟೆಗಳ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ. ಈ ಸೇವೆಯು ಉತ್ತರ ಕರ್ನಾಟಕದ ಪ್ರಮುಖ ಕೈಗಾರಿಕಾ ಮತ್ತು ವಾಣಿಜ್ಯ ಕೇಂದ್ರವಾದ ಹುಬ್ಬಳ್ಳಿ-ಧಾರವಾಡವನ್ನು ಪುಣೆಯೊಂದಿಗೆ ಸಂಪರ್ಕಿಸುತ್ತದೆ ಮತ್ತು ಬೆಳಗಾವಿಯ ಶ್ರೀಮಂತ ಕೃಷಿ ಕಬ್ಬಿನ ಪ್ರದೇಶದ ಮೂಲಕ ಸುಂದರವಾದ ಮಾರ್ಗದಲ್ಲಿ ಹಾದುಹೋಗುವುದು ವಿಶೇಷ.

ಪುಣೆ-ಎಸ್‌ಎಸ್‌ಎಸ್ ಹುಬ್ಬಳ್ಳಿ ವಂದೇ ಭಾರತ್ ರೈಲು ತನ್ನ ಪ್ರತಿಷ್ಠಿತ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಸಂಸ್ಥೆಗಳಿಗೆ ಹೆಸರುವಾಸಿಯಾದ ಬೆಳಗಾವಿ, ಶಾಸ್ತ್ರೀಯ ಸಂಗೀತ ವಾದ್ಯಗಳಿಗೆ ಹೆಸರುವಾಸಿಯಾದ ಮೀರಜ್ ಮತ್ತು ಕೃಷಿ ಉತ್ಪನ್ನಗಳಿಗೆ ಹೆಸರುವಾಸಿಯಾದ ಸಾಂಗ್ಲಿ ಸೇರಿದಂತೆ ಹಲವಾರು ಪ್ರಮುಖ ಸ್ಥಳಗಳ ಮೂಲಕ ಹಾದುಹೋಗುತ್ತದೆ. ಪ್ರಯಾಣಿಕರು ದಾರಿಯುದ್ದಕ್ಕೂ ಸತಾರದ ರಮಣೀಯ ಸೌಂದರ್ಯವನ್ನು ವೀಕ್ಷಿಸಬಹುದು.

ಸುಧಾರಿತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು 530 ಪ್ರಯಾಣಿಕರ ಆಸನ ಸಾಮರ್ಥ್ಯದೊಂದಿಗೆ 8 ಕೋಚ್ ಚೇರ್ ಕಾರ್ ವ್ಯವಸ್ಥೆಗಳನ್ನು ಒಳಗೊಂಡಿದೆ.

Edited By : Nirmala Aralikatti
PublicNext

PublicNext

16/09/2024 08:42 pm

Cinque Terre

16.86 K

Cinque Terre

0

ಸಂಬಂಧಿತ ಸುದ್ದಿ