ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು ಸಿಟಿ ಮಾರ್ಕೆಟ್, ಗೌರಿ ಪಾಳ್ಯ ಭಾರತದಲ್ಲಿ ಇಲ್ಲ ಪಾಕಿಸ್ತಾನದಲ್ಲಿದೆ - ಜಡ್ಜ್ ಗರಂ ಆಗಿದ್ಯಾಕೆ ಗೊತ್ತಾ?

ಬೆಂಗಳೂರು: ರಾಜ್ಯದಲ್ಲಿರು ಆಘಾತಕಾರಿ ದುರಾಡಳಿತವನ್ನು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರು ಬಹಿರಂಗಪಡಿಸಿದ್ದಾರೆ.

ಮೈಸೂರು ರೋಡ್‌ ಫ್ಲೈಓವರ್‌ಗೆ ಒಮ್ಮೆ ಹೋಗಿ ನೋಡಿ, ಪತ್ರಿಯೊಂದು ಆಟೋರಿಕ್ಷಾದಲ್ಲಿ ಹತ್ತು ಜನರು ಪ್ರಯಾಣಿಸುತ್ತಾರೆ. ಅವರಿಗೆ ಸಾರಿಗೆ ನಿಯಮಗಳು ಅನ್ವಯವಾಗುವುದಿಲ್ಲ ಯಾಕೆ ಗೊತ್ತಾ? ಸಿಟಿ ಮಾರ್ಕೆಟ್ ಹಾಗೂ ಗೌರಿ ಪಾಳ್ಯವು ಭಾರತದಲ್ಲಿ ಇಲ್ಲ, ಪಾಕಿಸ್ತಾನದಲ್ಲಿದೆ. ಇದು ಸತ್ಯ. ನೀವು ಎಷ್ಟೇ ಸ್ಟ್ರಿಕ್ಟ್ ಆಫೀಸ್‌ರನ್ನು ಅಲ್ಲಿ ಹಾಕಿದರೂ ಅವರಿಗೆ ಆಟೋಗಳನ್ನು ಹಿಡಿಯಲು ಆಗಲ್ಲ. ಹಾಗಿದೆ ಅಲ್ಲಿನ ವ್ಯವಸ್ಥೆ' ಎಂದು ಜಡ್ಜ್ ದುರಾಡಳಿತದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ಕೋರ್ಟ್‌ ಕಲಾಪ ವಿಡಿಯೋವನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ಬಿಜೆಪಿ ಮುಖಂಡ ವಿಷ್ಣು ವರ್ಧನ್ ರೆಡ್ಡಿ ಎಂಬವರು, 'ಬೆಂಗಳೂರು ಸಿಟಿ ಮಾರ್ಕೆಟ್ ಮತ್ತು ಗೌರಿ ಪಾಳ್ಯದಂತಹ ಮುಸ್ಲಿಂ ಪ್ರಾಬಲ್ಯದ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲು ಪೊಲೀಸರು ತುಂಬಾ ಹೆದರುತ್ತಾರೆ. ಇದನ್ನು ನ್ಯಾಯಾಧೀಶರು "ಮಿನಿ-ಪಾಕಿಸ್ತಾನ" ಎಂದು ಉಲ್ಲೇಖಿಸಿದ್ದಾರೆ. ಕಾಂಗ್ರೆಸ್ ತುಷ್ಟೀಕರಣ ರಾಜಕಾರಣದಿಂದ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ' ಎಂದು ವಾಗ್ದಾಳಿ ನಡೆಸಿದ್ದಾರೆ.

Edited By : Vijay Kumar
PublicNext

PublicNext

19/09/2024 02:21 pm

Cinque Terre

17.51 K

Cinque Terre

3

ಸಂಬಂಧಿತ ಸುದ್ದಿ