ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುನಿರತ್ನ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲು ಕಾಂಗ್ರೆಸ್ ಒಕ್ಕಲಿಗ ಮುಖಂಡರ ಚಿಂತನೆ

ಬೆಂಗಳೂರು: ಒಕ್ಕಲಿಗ ಸಮುದಾಯ ವಿರುದ್ಧ ನಾಲಿಗೆ ಹರಿಬಿಟ್ಟಿರುವ ಶಾಸಕ ಮುನಿರತ್ನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲೇಬೇಕು ಎಂದು ಕಾಂಗ್ರೆಸ್ ಒಕ್ಕಲಿಗ ಮುಖಂಡರು ತೀರ್ಮಾನಿಸಿದ್ದಾರೆ.

ನಿನ್ನೆ ರಾತ್ರಿ ಖಾಸಗಿ ಹೋಟೆಲ್‌ನಲ್ಲಿ ತಡರಾತ್ರಿಯ ತನಕ ಸಚಿವ ಚೆಲುವರಾಯಸ್ವಾಮಿ ನೇತೃತ್ವದಲ್ಲಿ ಒಕ್ಕಲಿಗ ಸಮುದಾಯದ ಕೈ ನಾಯಕರು ನಡೆಸಿದ ಸಭೆಯಲ್ಲಿ ಮುನಿರತ್ನ ಪ್ರಕರಣದ ಬಗ್ಗೆ ಗಂಭೀರ ಚರ್ಚೆ ನಡೆಸಿದರು. ಈ ಸಭೆಯಲ್ಲಿ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಸೇರಿದಂತೆ ಸಚಿವರಾದ ಸುಧಾಕರ್, ವೆಂಕಟೇಶ್, ಕೃಷ್ಣಬೈರೇಗೌಡ ಟಿ.ಬಿ. ಜಯಚಂದ್ರ, ಶಿವಲಿಂಗೇಗೌಡ, ಬಾಲಕೃಷ್ಣ, ಶರತ್ ಬಚ್ಚೇಗೌಡ, ರಮೇಶ್ ಬಾಬು, ನಂಜೇಗೌಡ ಸೇರಿದಂತೆ ಹಲವು ಶಾಸಕರು ಭಾಗಿಯಾಗಿದ್ದರು.

ಇಂದು ಸಿಎಂ ಭೇಟಿ ಮಾಡಿ ಮುನಿರತ್ನ ಪ್ರಕರಣವನ್ನ SIT ಮೂಲಕ ತನಿಖೆ ಮಾಡಿ ಎಂದು ಮನವಿ ಕೊಟ್ಟ ಬಳಿಕ ರಾಜ್ಯಪಾಲರನ್ನೂ ಭೇಟಿ ಮಾಡಿ ದೂರು ನೀಡುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಮೊದಲು ಸಿಎಂ ಭೇಟಿ ಮಾಡಿ ಎಸ್‌ಐಟಿಗೆ ಒತ್ತಾಯಿಸೋಣ ನಂತರ ಸಿಎಂ‌ ಸಿದ್ದರಾಮಯ್ಯರನ್ನ ಒಂದು ಮಾತು ಕೇಳಿ ನಂತರ ರಾಜ್ಯಪಾಲರ ಬಳಿ ಹೋಗೋಣ ಎಂಬ ತೀರ್ಮಾನಕ್ಕೆ ಕಾಂಗ್ರೆಸ್ ಒಕ್ಕಲಿಗ ನಾಯಕರು ಬಂದಿದ್ದಾರೆ.

Edited By : Vijay Kumar
PublicNext

PublicNext

20/09/2024 07:51 am

Cinque Terre

20.15 K

Cinque Terre

0

ಸಂಬಂಧಿತ ಸುದ್ದಿ