ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟೋಕನ್ ಗಿಂತ ಕ್ಯು ಆರ್ ಕೋಡ್ ನತ್ತ ಜನರ ಚಿತ್ತ

ನಮ್ಮ ಮೆಟ್ರೊದಲ್ಲಿ ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದು , ಜನರು ಕೂಡ ಆಧುನಿಕ ತಂತ್ರಜ್ನಾನದತ್ತ ಮೆರೆಹೊಗಿದ್ದಾರೆ ಹೇಗೆಂದರೆ.

ಪ್ರಯಾಣಿಕರು ಇತ್ತೀಚಿನ ದಿನಗಳಲ್ಲಿ ಟೋಕನ್ ಖರೀದಿಗಿಂತಲೂ ಕ್ಯುಆರ್ ಕೋಡ್ ಬಳಸಿ ಟಿಕೆಟ್ ಖರೀದಿಸಲು ಒಲವು ತೋರುತ್ತಿದ್ದಾರೆ.

ಪ್ರತೀ ತಿಂಗಳು ಕ್ಯು ಆರ್ ಕೋಡ್ ಬಳಸಿಕೊಂಡು ಪ್ರಯಾಣಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ.

ಕ್ಯುಆರ್ ಕೋಡ್ ಬಳಸಿ ಟಿಕೆಟ್ ಖರೀದಿ ಸೌಲಭ್ಯ ಆರಂಭಿಸಿದ ಒಂದೇ ವರ್ಷದಲ್ಲಿ ಬಳಕೆದಾರರ ಸಂಖ್ಯೆ 25 ಲಕ್ಷ ಗಡಿ ದಾಟಿದೆ. ಬಿಎಂಆರ್‌ಸಿಎಲ್ 2022ರ ನವೆಂಬರ್‌ನಲ್ಲಿ ಕ್ಯುಆರ್ ಕೋಡ್ ಟಿಕೆಟ್ ಆರಂಭಿಸಿತು. ಪ್ರಾರಂಭವಾದಾಗ 2.13 ಲಕ್ಷದಷ್ಟಿದ್ದ ಈ ಸಂಖ್ಯೆ, 2023ರ ಜನವರಿಯಲ್ಲಿ 5 ಲಕ್ಷಕ್ಕೆ, ಡಿಸೆಂಬರ್‌ನಲ್ಲಿ 25.9 ಲಕ್ಷಕ್ಕೇರಿತು. ಸದ್ಯ 30 ಲಕ್ಷಕ್ಕೂ ಅಧಿಕ ಜನರು ಕ್ಯುಆರ್ ಕೋಡ್ ಬಳಕೆ ಮಾಡುತ್ತಿದ್ದಾರೆ.

2023ರ ಅಕ್ಟೋಬರ್‌ನಲ್ಲಿ ನೇರಳೆ ಮಾರ್ಗ ಪೂರ್ಣ ಪ್ರಮಾಣದಲ್ಲಿ ಸಂಚಾರ ಆರಂಭಿಸಿದ ನಂತರ, ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ . ಈ ಮಾರ್ಗದಲ್ಲಿ ಟೆಕ್ಕಿಗಳ ಸಂಖ್ಯೆ ಹೆಚ್ಚಿದ್ದರಿಂದ ಕ್ಯುಆ‌ರ್ ಕೋಡ್ ಬಳಕೆ ಕೂಡ ಅಧಿಕವಾಯಿತು ಎನ್ನುತ್ತಾರೆ ಅಧಿಕಾರಿಗಳು.

Edited By : Somashekar
PublicNext

PublicNext

16/09/2024 08:04 pm

Cinque Terre

32.12 K

Cinque Terre

0

ಸಂಬಂಧಿತ ಸುದ್ದಿ