ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಶೋಭಾ ಬಿಲ್ಡಿಂಗ್‌ನಲ್ಲಿನ ಮಿರಜ್ ಪಬ್‌ಗೆ ವಿಶೇಷ ಸೌಲಭ್ಯ.? ಅವಧಿ ಮಿರಿದ್ರೂ ಲೌಡ್ ಸ್ಪೀಕರ್‌ಗಿಲ್ಲ ಬ್ರೇಕ್ - ಕಮಿಷನರ್‌ಗೆ ದೂರು

ಬೆಂಗಳೂರು: ನಗರದಲ್ಲಿರೋ ಪಬ್ ಬಾರ್‌ಗಳಿಗೆ ಒಂದು ರೂಲ್ಸ್ ಆದ್ರೆ ಚರ್ಚ್ ಸ್ಟ್ರೀಟ್ ಶೋಭಾ ಬಿಲ್ಡಿಂಗ್ ನಲ್ಲಿರೋ ಮಿರಜ್ ಪಬ್‌ಗೆ ಒಂದು ರೂಲ್ಸ್‌..? ಅನ್ನೊ ಪ್ರಶ್ನೆ ಮೂಡಿದೆ. ಪ್ರತಿ ವೀಕ್ ಎಂಡ್‌ನಲ್ಲೂ ಇಲ್ಲಿ ಲೌಡ್ ಸ್ಪೀಕರ್‌ನಲ್ಲಿ ಅತಿಯಾದ ಸೌಂಡ್ ಕೊಟ್ಟು ಪಾರ್ಟಿ ಮಾಡಿದ್ರು. ಇಲ್ಲಿ ಹೇಳೋರು ಇಲ್ಲ ಕೇಳೋರು ಇಲ್ಲದಂತಾಗಿದೆ.

ತಡರಾತ್ರಿ 1:30ರ ನಂತರ ಹೈ ಲೆವೆಲ್ ಸೌಂಡ್‌ನಲ್ಲಿ ಪಾರ್ಟಿ ಮಾಡ್ತಿದ್ದಾರೆ ಅಂದ ಕಮಿಷನರ್‌ಗೆ ವಿಡಿಯೋ ಟ್ಯಾಗ್ ದೂರು‌ ನೀಡಲಾಗಿದೆ. ಕೇವಲ ಈ ಮೀರಜ್ ಪಬ್‌ಗೆ ಮಾತ್ರ ಈ ಆತಿಥ್ಯ ಇನ್ನೂ ಎಷ್ಟು ದೂರು ನೀಡಿದ ಮೇಲೆ ಕ್ರಮ ಆಗುತ್ತೆ ಎಂದು X ಖಾತೆಯಲ್ಲಿ ಕಮಿಷನರ್‌ಗೆ ಪ್ರಶ್ನೆ ಮಾಡಲಾಗಿದೆ.

ಕಬ್ಬನ್ ಪಾರ್ಕ್ ಪೊಲೀಸರು , ಕೇಂದ್ರ ವಿಭಾಗ ಡಿಸಿಪಿಗೂ ಕೂಡ ಟ್ಯಾಗ್ ಮಾಡಿ ದೂರಲಾಗಿದೆ. ಈ ಪಬ್ ಪ್ರಭಾವಿ ರಾಜಕಾರಣಿಯೊಬ್ಬರ ಒಡೆತನದದ್ದು ಹೇಳಲಾಗ್ತಿದೆ. ಇದೇ ಕಾರಣಕ್ಕೆ ಈ ಪಬ್ ವಿಶೇಷ ಆತಿಥ್ಯ ಕಲ್ಪಿಸಲಾಗಿದೆ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.

Edited By : Suman K
PublicNext

PublicNext

16/09/2024 11:59 am

Cinque Terre

19.99 K

Cinque Terre

0

ಸಂಬಂಧಿತ ಸುದ್ದಿ