ಬೆಂಗಳೂರು: ಗ್ರಾಹಕರ ವಿಚಾರಕ್ಕೆ ಬಟ್ಟೆ ಅಂಗಡಿ ಮಾಲೀಕರು ಫೈಟಿಂಗ್ ಮಾಡಿಕೊಂಡಿದ್ದಾರೆ.
ಎರಡು ದಿನದ ಹಿಂದೆ ಚಿಕ್ಕಪೇಟೆ ಫ್ಲಾಜ್ ದ ಬಟ್ಟೆ ಅಂಗಡಿಯಲ್ಲಿ ಗಲಾಟೆ ನಡೆದಿದೆ. ಹಲ್ಲೆ ಮಾಡುವ ದೃಶ್ಯ ಸಿಟಿಟಿವಿಯಲ್ಲಿ ಸೆರೆಯಾಗಿದೆ.
ತನ್ನ ಅಂಗಡಿಯಿಂದ ಬೇರೆ ಅಂಗಡಿಗೆ ಗ್ರಾಹಕರು ಹೋದ್ರು ಅಂತ ಮಾಲೀಕನಿಗೆ ಥಳಿಸಿದ ಆರೋಪ ಕೇಳಿ ಬಂದಿದೆ. ಇಬ್ಬರ ಮೇಲೆ ಆರು ಜನರಿಂದ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮನಬಂದಂತೆ ಹಲ್ಲೆ ನಡೆಸಿರೊಪ ಕುರಿತು ಸಿಟಿ ಮಾರ್ಕೇಟ್ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.
ಕಿರಣ್ ಚಿಕ್ಕಪೇಟೆ ಫ್ಲಾಜಾದಲ್ಲಿ ಮಾರುತಿ ಅಟ್ಪೈರ್ ಎಂಬ ಬಟ್ಟೆ ಅಂಗಡಿ ನಡೆಸುತ್ತಿದ್ರು. ಸೆ.16ರಂದು ತಂದೆ ರಮೇಶ್ ಜೊತೆ ಅಂಗಡಿಯಲ್ಲಿ ಗ್ರಾಹಕರಿಗೆ ಕಿರಣ್ ಸೀರೆ ತೋರಿಸ್ತಿದ್ದ. ಏಕಾಏಕಿ ಪಕ್ಕದ ಕಲಾನಿಕೇತನ್ ಬಟ್ಟೆ ಅಂಗಡಿ ಮಾಲೀಕ ಬಂದು ಕಿರಿಕ್ ಮಾಡಿದ್ದಾನೆ.
ಕಲಾನಿಕೇತನ್ ಬಟ್ಟೆ ಅಂಗಡಿ ಮಾಲೀಕ ಹಾಗೂ ಆತನ ಕಡೆಯವರು ಪುಂಡಾಟ ತೋರಿದ್ದು,
ಕಲಾನಿಕೇತನ್ ಹೋಗಿದ್ದ ಗ್ರಾಹಕರು ಕಲೆಕ್ಷನ್ ಸರಿಯಿಲ್ಲ ಕಿರಣ್ ಅಂಗಡಿಗೆ ಬಂದಿದ್ದಾರೆ ಎಂದು ಮೊದಲು ಕಿರಿಕ್ ಮಾಡಿದ್ದಾರೆ. ಕಿರಿಣ್ ಹಾಗೂ ಆತನ ತಂದೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಪಂಕಜ್ ಕುಮಾರ್, ಪಾರಸ್ ಲಾಲ್, ಮನೋಹರ್ ಲಾಲ್ ಸೇರಿ ಆರು ಜನರಿಂದ ಹಲ್ಲೆ ನಡೆದಿರೋದಾಗಿ ದೂರು ನೀಡಿದ್ದಾರೆ.
PublicNext
18/09/2024 12:56 pm