ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ತಾಯಿಯನ್ನೇ ಚಾಕುವಿನಿಂದ ಇರಿದು ಮಗನೆ ಕೊಲೆ ಮಾಡಿರೋ ಘಟನೆ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯ ಶ್ರೀಕಂಠೇಶ್ವರ ನಗರದಲ್ಲಿ ನಡೆದಿದೆ. ಆಯೇಷಾ (50) ಮಗನಿಂದ ಕೊಲೆಯಾದ ತಾಯಿಯಾದ್ರೆ ಶುಫಿಯಾನ್ (32) ತಾಯಿಯನ್ನು ಕೊಂದ ಮಗನಾಗಿದ್ದಾನೆ.ಇಂದು ಬೆಳಗ್ಗೆ ಘಟನೆ ನಡೆದಿದ್ದು, ಮನೆಯಲ್ಲಿದ್ದ ಚಾಕುವಿನಿಂದ ಇರಿದು ಶುಫಿಯಾನ್ ತಾಯಿಯನ್ನ ಕೊಲೆ ಮಾಡಿದ್ದಾನೆ.
ಮೃತ ಆಯೇಷಾ ಗಂಡ ಮೃತಪಟ್ಟಿದ್ದು ಇಬ್ಬರು ಮಕ್ಕಳ ಜೊತೆ ವಾಸಿಸುತ್ತಿದ್ದಳು.
ಕೆಲಸಕ್ಕೆ ಹೋಗದೆ ಸೈಕೋ ರೀತಿ ವರ್ತಿಸುತ್ತಿದ್ದ ಶುಫಿಯಾನ್ ಕೆಲಸಕ್ಕೆ ಹೋಗು ಎಂದು ಮಗನಿಗೆ ಬುದ್ದಿವಾದ ಹೇಳಿದ್ದಕ್ಕೆ ಕುಪಿತಗೊಂಡು ಕೊಲೆಮಾಡಿರೋದಾಗಿ ಹೇಳಲಾಗ್ತಿದೆ. ಇನ್ನೂ ಕೊಲೆ ಮಾಡಿದ್ದ
ಶುಫಿಯಾನ್ ನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮೃತದೇಹ ಮರಣೋತ್ತರ ಪರೀಕ್ಷೆಗೆ ಕಿಮ್ಸ್ ಆಸ್ಪತ್ರೆಗೆ ರವಾನೆಯಾಗಿದ್ದು, ಪುಟ್ಟೇನಹಳ್ಳಿ ಪೊಲೀಸ್ರು ವಿಚಾರಣೆ ನಡೆಸುತ್ತಿದ್ದಾರೆ.
PublicNext
08/11/2024 10:09 pm