ಬೆಂಗಳೂರು: ಗಾಡಿಗೆ ಸೈಡ್ ಬಿಡದಿದ್ದಕ್ಕೆ ಬಿಎಂಟಿಸಿ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಬಸ್ ವಿಂಡೋ ವನ್ನ ಪುಡಿ ಪುಡಿ ಮಾಡಿ ಬಸ್ ಚಾಲಕನನ್ನ ಕೆಳಗಿಳಿಸಿ ಹಲ್ಲೆ ಮಾಡಿದ್ದು ಬೆಂಗಳೂರಿನ ಕಾರ್ಪೋರೇಷನ್ ಬಳಿ ನಡೆದಿರುವ ಘಟನೆ ಇದಾಗಿದೆ.
ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಯುವಕ ಬಸ್ ಹಾಗೂ ಡಿವೈಡರ್ ಮಧ್ಯೆ ಗಾಡಿ ನುಗ್ಗಿಸಿದ್ದಾನೆ. ಬಳಿಕ ಬಸ್ ಡ್ರೈವರ್ ಗೆ ಸೈಡ್ ಕೊಡುವಂತೆ ಅವಾಜ್ ಜೊತೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಆರೋಪ ಕೂಡಾ ಇದೆ. ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕ, ಟೂಲ್ಸ್ ಸಮೇತ ಗಾಡಿಯಲ್ಲಿ ಹೋಗ್ತಿದ್ದ….ಸಿಗ್ನಲ್ ಬಳಿ ಬಸ್ ನಿಲ್ಲಿಸ್ತಿದ್ದಂತೆ ಬಸ್ ಚಾಲಕನ ಮೇಲೆ ದಾಳಿ ಮಾಡ್ತಾನೆ.
ಟೂಲ್ಸ್ ನಿಂದ ಬಿಎಂಟಿಸಿ ಬಸ್ ಡ್ರೈವರ್ ಮೇಲೆ ಹಲ್ಲೆ ಮಾಡಿದ್ದು ಕೂಡಲೇ ಆರೋಪಿಯನ್ನ ಹಿಡಿದು ಸ್ಥಳೀಯರು ಥಳಿಸಿದ್ದಾರೆ..ಥಳಿಸಿ ಪೊಲೀಸ್ರಿಗೆ ಒಪ್ಪಿಸಿದ್ದಾರೆ. ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
PublicNext
12/11/2024 08:08 pm