ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಶೀಲ ಶಂಕಿಸಿ ಪತ್ನಿಯನ್ನು ಕೊಂದು ಧರ್ಮಸ್ಥಳಕ್ಕೆ ಮುಡಿನಕೊಟ್ಟಿದ್ದ ಸಿದ್ದರಾಮಣ್ಣ

ಬೆಂಗಳೂರು: ಪತ್ನಿಯ ಶೀಲ ಶಂಕಿಸಿ ಆಕೆಯ ಕಥೆಯನ್ನೇ ಮುಗಿಸಿಬಿಟ್ಟ ಸಿದ್ದರಾಮಣ್ಣ. ಹೆಂಡತಿ‌ ಕೊಂದು ಸೀದಾ ಹೋಗಿದ್ದು ಧರ್ಮಸ್ಥಳಕ್ಕೆ. ಪತ್ನಿಗೆ ಚಟ್ಟ ಕಟ್ಟಿದವನ್ನು ಮಂಜುನಾಥನ ಸನ್ನಿಧಾನದಲ್ಲಿ ದೇವರಿಗೆ ಮುಡಿ ಕೊಟ್ಟು ಪಾಪ ಪ್ರಾಯಶ್ಚಿತ್ತ ಮಾಡಿಕೊಂಡಿದ್ನಂತೆ.

ಹೆಂಡತಿ ಕೊಂದ ಪಾಪ ಕಳೆದುಕೊಳ್ಳಲು ಧರ್ಮಸ್ಥಳದಲ್ಲಿ ಮುಡಿ ಕೊಟ್ಟ ಸಿದ್ದರಾಮಣ್ಣ ಧರ್ಮಸ್ಥಳದಲ್ಲೆ ಮಾದನಾಯಕನಹಳ್ಳಿ ಪೊಲೀಸರಿಗೆ ಲಾಕ್ ಆಗಿದ್ದಾನೆ. ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯ ಗಂಗೊಂಡನಹಳ್ಳಿಯ ಶಾಂತಿನಗರದಲ್ಲಿ ಸಿದ್ದರಾಮಣ್ಣ ಮತ್ತು ಪತ್ನಿ ಕೋಕಿಲಾ ವಾಸವಗಿದ್ದರು.

ಕೋಕಿಲಾ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡ್ತಿದ್ರೆ, ಆರೋಪಿ ಸಿದ್ದರಾಮಣ್ಣ ಫ್ಯಾಕ್ಟರಿಯಲ್ಲಿ ಕೆಲಸ ಮಾಡ್ತಿದ್ದ. ಕೋಕಿಲಾ ಮೇಲೆ ಸಿದ್ದರಾಮಣ್ಣನಿಗೆ ಮೂಡಿತ್ತು ಅನುಮಾನವಿತ್ತು. ಪತ್ನಿ ಶೀಲ ಶಂಕಿಸಿ ಪ್ರತಿದಿನ ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ಕುಟುಂಬಸ್ಥರು ಎಷ್ಟೇ ಬುದ್ಧಿ ಹೇಳಿದ್ರು ಹೆಂಡತಿ ಜೊತೆ ಜಗಳ ಮುಂದುವರೆಸಿದ್ನಂತೆ.

ಕಳೆದ ತಿಂಗಳು 28ರ ರಾತ್ರಿ ಹೆಂಡತಿ ಜೊತೆ ಕಿರಿಕ್ ತೆಗೆದಿದ್ದ ಸಿದ್ದರಾಮಣ್ಣ ಕೋಪದ ಬರದಲ್ಲಿ ಕೋಕಿಲಾಳ ಕುತ್ತಿಗೆಗೆ ವೇಲ್ ನಿಂದ ಬಿಗಿದು ಕೊಲೆ ಮಾಡಿದ್ದ. ಪತ್ನಿ ಕೋಕಿಲ ಕೊಲೆ ಮಾಡಿ ಸಿದ್ದರಾಮಣ್ಣ ಒಂದು ಬ್ಯಾಗ್‌ನಲ್ಲಿ ಬಟ್ಟೆ ಪ್ಯಾಕ್ ಮಾಡಿಕೊಂಡು ಸೀದಾ ಧರ್ಮಸ್ಥಳಕ್ಕೆ ಹೋಗಿದ್ದ. ಕೋಕಿಲಾ ಪೋಷಕರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಸಿದ್ದರಾಮಣ್ಣನ ಮಾದನಾಯಕನಹಳ್ಳಿ ಪೊಲೀಸರು ಧರ್ಮಸ್ಥಳದಲ್ಲೆ ಬಂಧಿಸಿದ್ದಾರೆ.

Edited By : Vinayak Patil
PublicNext

PublicNext

13/11/2024 09:53 am

Cinque Terre

22.92 K

Cinque Terre

0

ಸಂಬಂಧಿತ ಸುದ್ದಿ