ಬೆಂಗಳೂರು: ಕಾವೇರಿ ನೀರಿನ ಪೈಪ್‌ಗೆ ಕೊಳಚೆ ನೀರಿನ ಪೈಪ್ ಅಳವಡಿಕೆ ಆರೋಪ ಕೇಳಿ ಬಂದಿದೆ.. ರಾಯಲ್ ಬ್ಲಿಸ್ ಅಪಾರ್ಟ್ಮೆಂಟ್ ಮಾಲೀಕನಿಂದ ಪೈಪ್ ಅಳವಡಿಕೆ ಮಾಡಿದ್ದು, ಹಾಗಾಗಿ ಮಾಲೀಕನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಜಲಮಂಡಳಿ ಸೂಚನೆ ಕೊಟ್ಟಿದೆ.
ಥಣಿಸಂದ್ರದ ಹೆಗಡೆನಗರದ ರಾಯಲ್ ಬ್ಲಿಸ್ ಅಪಾರ್ಟ್ಮೆಂಟ್ ಮಾಲೀಕ ಕೊಳವೆ ಅಳವಡಿಕೆ ಮಾಡಿ ಕಾಂಕ್ರೀಟ್‌ನಿಂದ ಮುಚ್ಚಿದ್ದು ಬೆಳಕಿಗೆ ಬಂದಿದೆ..
ಜಲಮಂಡಳಿ ಅಧಿಕಾರಿಗಳ ಪರಿಶೀಲನೆಯ ವೇಳೆ ಅಕ್ರಮ ಸಂಪರ್ಕ ಪತ್ತೆಯಾಗಿದ್ದು ಸುಮಾರು 50 ಲಕ್ಷ ಲೀಟರ್ ಕಾವೇರಿ ನೀರು ಪೋಲಾಗಿದೆ. ಕೊಳವೆ ಕಿತ್ತು ಹೋಗಿ ರಭಸವಾಗಿ ಚಿಮ್ಮಿದ ನೀರು ಅಕ್ಕ ಪಕ್ಕದ ಕಟ್ಟಡದ ಗ್ಲಾಸ್ ಪೀಸ್ ಪೀಸ್ ಆಗಿ, ಮನೆಗಳಿಗೆ ಹಾನಿ ಮಾಡಿದ್ದಲ್ಲದೆ, ಕಟ್ಟಡದ ಸೀಲಿಂಗ್ ಜೊತೆಗೆ ಕಾರಿನ ಗ್ಲಾಸ್ ಪುಡಿ ಪುಡಿ ಆಗಿದೆ.
ಎಲ್ಲಾ ನಷ್ಟವನ್ನ ಅಪಾರ್ಟ್ಮೆಂಟ್ ಮಾಲೀಕನಿಂದ ವಸೂಲಿಗೆ ಜಲ ಮಂಡಳಿ ಸೂಚನೆ ಕೊಟ್ಟಿದ್ದು ಅಪಾರ್ಟ್ಮೆಂಟ್ ಮಾಲೀಕನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಸೂಚನೆ ಕೊಟ್ಟಿದ್ದಾರೆ.
PublicNext
14/11/2024 12:55 pm