ಬೆಂಗಳೂರು : ವೈಯಕ್ತಿಕ ಕಾರಣಕ್ಕಾಗಿ ಪತ್ನಿಯೊಂದಿಗೆ ಜಗಳವಾಡಿ ರಿಚ್ಮಂಡ್ ಮೇಲ್ಸೇತುವೆಯಿಂದ ಕೆಳಗೆ ಜಿಗಿಯಲು ಪ್ರಯತ್ನಿಸಿದ್ದ ವ್ಯಕ್ತಿಯನ್ನ ಅಶೋಕ ನಗರ ಸಂಚಾರ ಠಾಣೆ ಪೊಲೀಸರು ರಕ್ಷಿಸಿದ್ದಾರೆ. ಬುಧವಾರ ಸಂಜೆ ಕರ್ತವ್ಯದಲ್ಲಿ ಟ್ರಾಫಿಕ್ ಕಾನ್ ಸ್ಟೇಬಲ್ ಲೊಕೇಶ್ ಅವರಿಗೆ ಮೇಲ್ಸೇತುವೆಯಿಂದ ಮಹಿಳೆ ಕಿರುಚಾಡುತ್ತಿರುವುದನ್ನ ಕಂಡು ಕೂಡಲೇ ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ.
ಮೇಲ್ಸೇತುವೆಯಿಂದ ಮೊಬೈಲ್ ಎಸೆದು ಜಿಗಿಯಲು ಯತ್ನಿಸಿದ್ದ ವೆಂಕಟರಾಜು ಎಂಬುವರನ್ನ ತಡೆದು ರಕ್ಷಿಸಿದ್ದಾರೆ. ಬಳಿಕ ಸಮಾಧಾನಪಡಿಸಿ ಹೊಯ್ಸಳ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕೋಲಾರ ಮೂಲದ ವೆಂಕಟರಾಜು ಅವರಿದ್ದ ಕಾರಿನಲ್ಲಿ ಪತ್ನಿ ಹಾಗೂ ಭಾಮೈದ ಕಾರಿನಲ್ಲಿದ್ದರು. ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದು ನಿನ್ನೆ ಸಂಜೆ 6.30 ಸುಮಾರಿಗೆ ಮನೆಗೆ ಹೋಗುವಾಗ ವೈಯಕ್ತಿಕ ಕಾರಣಕ್ಕಾಗಿ ಗಂಡ-ಹೆಂಡತಿ ನಡುವೆ ಜಗಳವಾಗಿದೆ. ಕಾರು ಓಡಿಸುವಾಗಲೇ ಕಾರಿನ ಕಿಟಕಿ ತೆರೆದು ಜಿಗಿಯಲು ವೆಂಕಟರಾಜು ಮುಂದಾಗಿದ್ದ. ಆತಂಕಗೊಂಡ ಕಾರಿನ ಚಾಲಕ ರಿಚ್ಮಂಡ್ ಮೇಲುಸೇತುವೆ ಮೇಲೆ ಕಾರು ನಿಲ್ಲಿಸಿದ್ದಾರೆ.
ಡೋರ್ ತೆಗೆದು ತಮ್ಮ ಬಳಿಯಿದ್ದ ಮೊಬೈಲ್ ಎಸೆದು ಜಿಗಿಯಲು ಪ್ರಯತ್ನಿಸಿದ್ದ. ಈ ವೇಳೆ ಪತ್ನಿ ಜೋರಾಗಿ ಕಿರುಚಿಕೊಂಡಿದ್ದಾರೆ. ಕಿರುಚಾಟ ಶಬ್ಧ ಕಂಡು ಕೂಡಲೇ ಟ್ರಾಫಿಕ್ ಸಿಬ್ಬಂದಿ ಲೊಕೇಶ್ ಅವರು ಸ್ಥಳಕ್ಕೆ ಧಾವಿಸಿ ರಕ್ಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Kshetra Samachara
14/11/2024 10:44 pm