ಬೆಂಗಳೂರು: ವಿಜಯನಗರದ ಅರಿಹಂತ್ ಜ್ಯುವೆಲ್ಲರ್ಸ್ ಮಾಲೀಕನ ಮನೆ ಕಳ್ಳತನ ಪ್ರಕರಣದಲ್ಲಿ ಖತರ್ನಾಕ್ ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಿನ್ನ ಮತ್ತು ನಗದನ್ನ ಬ್ಯಾಗ್ ಗಳಲ್ಲಿ ತುಂಬಿಕೊಂಡು ಪರಾಯಾಗಿದ್ದಾರೆ. ಇಬ್ಬರು ಖದೀಮರು ಎರಡು ಬ್ಯಾಗ್ಗಳಲ್ಲಿ ಚಿನ್ನಾಭರಣ ಸಾಗಾಟ ಮಾಡಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನವೆಂಬರ್ 2 ನೇ ತಾರೀಖು ವಿಜಯನಗರದ ಅರಿಹಂತ್ ಜ್ಯುವೆಲ್ಲರ್ಸ್ ಮಾಲೀಕ ಸುರೇಂದ್ರ ಕುಮಾರ್ ಜೈನ್ ಮನೆಯಲ್ಲಿ ಕಳ್ಳತನ ನಡೆದಿತ್ತು. ಮನೆ ಕೆಲಸಕ್ಕಿದ್ದ ನಾಮರಾಜ್ ಹಾಗೂ ಆತನ ಸ್ನೇಹಿತ ಸೇರಿ ಸುರೇಂದ್ರ ಕುಮಾರ್ ಮನೆಯಲ್ಲಿದ್ದ ನಗದು ಹಣ ಸೇರಿ ಸುಮಾರು 15 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ರು.
ಮನೆಯಿಂದ ಬ್ಯಾಗ್ ಗಳಲ್ಲಿ ಚಿನ್ನಾಭರಣ, ಹಣ ತುಂಬಿಕೊಂಡು ಎರಡು ಬ್ಯಾಗ್ ಗಳಲ್ಲಿ ಹೊರಲು ಸಾಕಾಗುವಷ್ಟು ಚಿನ್ನಾಭರಣ ಮಾತ್ರ ತಂದಿದ್ದಾರೆ. ನಂತರ ಲಿಫ್ಟ್ ಪಕ್ಕದ ರೂಂಗೆ ಹೋಗಿ ವಾಪಸ್ ಬಂದು ಮನೆಯಿಂದ ಬೈಕ್ ನಲ್ಲಿ ಯಶವಂತಪುರ ರೈಲು ನಿಲ್ದಾಣಕ್ಕೆ ಹೋಗಿದ್ದಾರೆ. ಅಲ್ಲಿಂದ ನೇಪಾಳಕ್ಕೆ ಎಸ್ಕೇಪ್ ಆಗಿದ್ದಾರೆ.
ಕಳ್ಳತನಕ್ಕು ಮುನ್ನ ಪತ್ನಿಯನ್ನ ಯಶವಂತಪುರ ರೈಲು ನಿಲ್ದಾಣಕ್ಕೆ ಕಳಿಸಿದ್ದ ನಾಮ್ ರಾಜ್ ಆನಂತರ ಸ್ನೇಹಿತನನ್ನ ಕರೆಯಿಸಿಕೊಂಡು ಮನೆಯಲ್ಲಿ ಕಳ್ಳತನ ಮಾಡಿದ್ದಾನೆ. ಸದ್ಯ ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿ ಇಬ್ಬರು ಕಳ್ಳರಿಗಾಗಿ ವಿಜಯನಗರ ಪೊಲೀಸರ ಶೋಧ ನಡೆಸುತ್ತಿದ್ದಾರೆ.
PublicNext
14/11/2024 08:36 am