ಬೆಂಗಳೂರು: ಪ್ರತಿ ವರ್ಷದಂತೆ ಈ ವರ್ಷವೂ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಕೃಷಿ ಮೇಳ- 2024 ಆಯೋಜಿಸಲಾಗಿದೆ. ಇಂದಿನಿಂದ ನವೆಂಬರ್ 17ರ ತನಕ ನಡೆಯುವ ಕೃಷಿ ಮೇಳದಲ್ಲಿ ನಾಲ್ಕು ನೂತನ ತಳಿಗಳನ್ನು ಬಿಡುಗಡೆ ಮಾಡಲಾಗಿದ್ದು, ಈ ತಳಿಗಳ ಪ್ರಾತ್ಯಕ್ಷಿಕೆಗಳು ವಿಶ್ವವಿದ್ಯಾಲಯದ ಆವರಣದಲ್ಲಿ ಬೆಳೆಯಲಾಗಿದೆ. ಅಲ್ಲದೆ, ತಂತ್ರಜ್ಞಾನ ಆವಿಷ್ಕಾರ, ಹೊಸ ಸಲಕರಣೆಗಳನ್ನು ಅನಾವರಣ ಮಾಡಲಾಗಿದೆ. ಈ ಮೇಳದಲ್ಲಿ ಯುವ ರೈತರು, ಮಹಿಳೆಯರು ಭಾಗಿಯಾಗಿದ್ದು, ಕೃಷಿ ಮೇಳ ತುಂಬಾ ಉಪಕಾರಿಯಾಗಿದೆ ಎಂದು ಹೇಳಿದ್ದಾರೆ.
ಹವಾಮಾನಕ್ಕೆ ಹೊಂದಿಕೊಂಡು ಕೃಷಿಗೆ ಅನುಕೂಲವಾಗುವ ತಾಂತ್ರಿಕತೆ ಪರಿಚಯಿಸಲಾಗಿದೆ. ಇದಕ್ಕಾಗಿ ವಿಶ್ವವಿದ್ಯಾಲಯದಿಂದ ಅಭಿವೃದ್ಧಿಪಡಿಸಿರುವ ಸೆನ್ಸಾರ್ ಆಧಾರಿತ ತಂತ್ರಜ್ಞಾನಗಳನ್ನು ಪ್ರದರ್ಶಿಸಲಾಗಿದೆ. ಮೇಳದಲ್ಲಿ 700ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದೆ. ಸಿರಿಧಾನ್ಯ ಆಹಾರಕ್ಕೆ ಸಂಬಂಧಿಸಿ ವಿಶೇಷ ಮಳಿಗೆಗಳಿವೆ. ತಪ್ಪದೇ ಒಮ್ಮೆ ಭೇಟಿ ನೀಡಿ.
PublicNext
14/11/2024 08:00 pm