ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಮನೆ ಬಾಡಿಗೆದಾರನಿಂದಲೇ ಸ್ಕೂಟರ್ ಕಳವು - ಕಳ್ಳತನದ ಕೃತ್ಯ ಸಿಸಿಟಿವಿಯಲ್ಲಿ ಸೆರೆ

ದೊಡ್ಡಬಳ್ಳಾಪುರ : ಮನೆ ಮಾಲೀಕ ಮನೆಯೊಳಗಿದ್ದಾಗಲೇ, ಮನೆಯ ಕಾಂಪೌಂಡ್ ಒಳಗೆ ಪ್ರವೇಶಿಸಿದ ಮುಸುಕುಧಾರಿ ವ್ಯಕ್ತಿ ಸ್ಕೂಟರ್ ಕಳವು ಮಾಡಿ ಪರಾರಿಯಾಗಿದ್ದ, ಸ್ಕೂಟರ್ ಕಳ್ಳನನ್ನ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪತ್ತೆ ಮಾಡಿದ್ದು, ಬಂಧಿತ ಆರೋಪಿ ಮನೆಯಲ್ಲಿ ಬಾಡಿಗೆದಾರನೆಂಬದು ತಿಳಿದು ಬಂದಿದೆ.

ದೊಡ್ಡಬಳ್ಳಾಪುರ ನಗರದ ಹೊರವಲಯದ ಕುರುಬರಹಳ್ಳಿಯಲ್ಲಿ ಕಳೆದ ಗುರುವಾರ ಸಂಜೆ 5 ಗಂಟೆ ಸಮಯದಲ್ಲಿ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಇನ್ಸ್ಪೆಕ್ಟರ್ ಸಾಧಿಕ್ ಪಾಷಾರವರ ನೇತೃತ್ವದ ತಂಡ ಆರೋಪಿಯನ್ನ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ, ಬಂಧಿತ ಆರೋಪಿ ಶಿವಕುಮಾರ್ ಎಂದು ತಿಳಿದು ಬಂದಿದೆ.

ಆರೋಪಿ ಶಿವಕುಮಾರ್ ಹುಲಿಕುಂಟೆ ಗ್ರಾಮದ ನಿವಾಸಿಯಾಗಿದ್ದು, ಇದೇ ಮನೆಯಲ್ಲಿ ಬಾಡಿಗೆದಾರನಾಗಿದ್ದ, ಇತ್ತಿಚೇಗಷ್ಟೆ ಮನೆ ಖಾಲಿ ಮಾಡಿದ್ದ, ಮಾಲೀಕರು ಮರೆತು ಬಿಟ್ಟು ಹೋಗಿದ್ದ ಸ್ಕೂಟರ್ ಕೀ ತೆಗೆದುಕೊಂಡಿದ್ದ ಆತ, ಮನೆ ಖಾಲಿ ಮಾಡಿದ ಬಳಿಕ ಮುಸುಕುಧಾರಿಯಾಗಿ ಬಂದು ಸ್ಕೂಟರ್ ಕಳವು ಮಾಡಿದ್ದನಂತೆ.. ಇನ್ನು ಈತ ಸ್ವಲ್ಪ ಮಾನಸಿಕ ಸ್ಥಿಮೀತ ಕಳೆದುಕೊಂಡಂತೆ ಕಾಣುತ್ತಾನೆ ಎಂದು ಪೊಲೀಸ್ ಮೂಲದಿಂದ ತಿಳಿದು ಬಂದಿದೆ.

Edited By : Vinayak Patil
PublicNext

PublicNext

12/11/2024 09:59 am

Cinque Terre

20.73 K

Cinque Terre

0

ಸಂಬಂಧಿತ ಸುದ್ದಿ