ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 'ರಸ್ತೆ ಗುಂಡಿ ಮುಚ್ಚುವ ಬದಲು ಜೇಬು ತುಂಬಿಸಿಕೊಂಡಿದ್ದಾರೆ'

ಬೆಂಗಳೂರು: ಬೆಂಗಳೂರು ರಸ್ತೆ ಗುಂಡಿಗಳ ಬಗ್ಗೆ ಸಂಸದ ಪಿಸಿ ಮೋಹನ್ ವ್ಯಂಗ್ಯವಾಡಿದ್ದಾರೆ. ಗುಂಡಿ ಬಿದ್ದಿರುವ ರಸ್ತೆಯ ವಿಡಿಯೋ ಶೇರ್ ಮಾಡಿ ಕಾಲೆಳೆದ ಎಂಪಿ, ಹದಿನೈದು ದಿನದಲ್ಲಿ ಗುಂಡಿ ಮುಚ್ಚುತ್ತೇವೆ ಎಂದಿದ್ದರು! ರಸ್ತೆ ಗುಂಡಿ ಮುಚ್ಚುವ ಬದಲು ಜೇಬು ತುಂಬಿಸಿಕೊಂಡಿದ್ದಾರೆ ಎಂದು ಟೀಕೆ ಮಾಡಿದ್ದಾರೆ.

ಗುಂಡಿಗಳು ಎಲ್ಲಿ‌ ಮುಚ್ಚಿದ್ದೀರಾ? ಅಂತ ಸಂಸದ ಪಿಸಿ ಮೋಹನ್ ಪ್ರಶ್ನೆ ಮಾಡಿದ್ದಾರೆ. ಸೆಪ್ಟೆಂಬರ್ 15ರ ಒಳಗಾಗಿ ಗುಂಡಿ ಮುಚ್ಚುವಂತೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ಡೆಡ್ ಲೈನ್ ಕೊಟ್ಟಿದ್ದರು. ಈ ಹಿನ್ನೆಲೆ ಬಿಬಿಎಂಪಿ ಅಧಿಕಾರಿಗಳು, ಸಿಬ್ಬಂದಿ ರಸ್ತೆ ಗುಂಡಿಗಳನ್ನು ಹುಡುಕಿ ಹುಡುಕಿ ಮುಚ್ಚಿದ್ದರು. ಆದರೂ ಕೆಲವು ರಸ್ತೆಗಳಲ್ಲಿ ಗುಂಡಿಗಳು ಹಾಗೆ ಇವೆ. ಇಂಥಹದ್ದೇ ರಸ್ತೆಯೊಂದರ ವಿಡಿಯೋ ಶೇರ್ ಮಾಡಿದ ಪಿಸಿ ಮೋಹನ್ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

Edited By : Shivu K
PublicNext

PublicNext

18/09/2024 10:47 pm

Cinque Terre

31.08 K

Cinque Terre

0