ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 6 ದಿನಗಳ ಹಿಂದೆ ಉದ್ಘಾಟನೆ- ಅಂತರಾಳ ಚಿತ್ರಣ ಅನಾವರಣ!

ಬೆಂಗಳೂರು: 6 ದಿನಗಳ ಹಿಂದೆ ಉದ್ಘಾಟನೆಗೊಂಡ ಪಾರ್ಕ್ ನ ಅಂತರಾಳದ ಚಿತ್ರಣವನ್ನು ಪುಟಾಣಿ ಬಿಚ್ಚಿಟ್ಟಿದೆ.

ಪಾರ್ಕ್ ನ ಒಳಗಿನ ರಹಸ್ಯವನ್ನ ಬಿಚ್ಚಿಟ್ಟ ಬಾಲಕಿ, ಪಾರ್ಕ್ ಸರಿಮಾಡಿಸಿ ಕೊಡುವಂತೆ ಬಿಬಿಎಂಪಿಗೆ ಮನವಿ ಮಾಡಿದ್ದಾಳೆ.

ವಿಡಿಯೋ ಮಾಡಿ ಬಿಬಿಎಂಪಿಗೆ ಮನವಿ ಮಾಡಿದ ಬಾಲಕಿ ಶರಣ್ಯ, ಗಾಂಧಿನಗರದ ದತ್ತಾತ್ರೇಯ ಟೆಂಪಲ್ ವಾರ್ಡ್ ನಲ್ಲಿರುವ ಬಿಬಿಎಂಪಿಯ ಸೌಹಾರ್ದ ಉದ್ಯಾನವನದ ಜೋಕಾಲಿ ಹಾಳಾಗಿದೆ, ಆಟವಾಡುವ ಸ್ಲೈಡ್ ತುಂಡಾಗಿದೆ ಅಂತ ದೂರಿದ್ದಾಳೆ. ಜೊತೆಗೆ ಇದರಿಂದ ಬೇರೆ ಮಕ್ಕಳು ಪಾರ್ಕ್ ಗೆ ಬರ್ತಿಲ್ಲ. ದಯವಿಟ್ಟು ಅರ್ಥ ಮಾಡ್ಕೊಳ್ಳಿ, ದಯವಿಟ್ಟು ಸರಿ ಮಾಡಿ ಎಂದು ಬಾಲಕಿ ಮನವಿ ಮಾಡಿದ್ದಾಳೆ. ಈ ಪಾರ್ಕ್ ನ್ನ ಡಿಸೆಂಬರ್ 15ರಂದು ಪಾಲಿಕೆ ಮರು ಉದ್ಘಾಟನೆ ಮಾಡಿತ್ತು. ಈಗ ನೋಡಿದ್ರೆ ಅವಸ್ಥೆ ಹೀಗಾಗಿದೆ ಅಂತ ಜನಕ್ರೋಶವೂ ವ್ಯಕ್ತವಾಗಿದೆ.

Edited By : Somashekar
PublicNext

PublicNext

21/12/2024 07:05 pm

Cinque Terre

15.3 K

Cinque Terre

0

ಸಂಬಂಧಿತ ಸುದ್ದಿ