ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಬಿಎಂಪಿ ಆಯುಕ್ತರ ಮುಂದೆ ದೂರಿನ ರಾಶಿ

ಬೆಂಗಳೂರು: ಬಿಬಿಎಂಪಿ ಕಮೀಷನರ್ ಮುಂದೆ ದೂರುಗಳ ಸರಮಾಲೆ ಬಂದಿದೆ. ಮಹಾದೇವಪುರ ವಲಯದಲ್ಲಿ

ಆಯುಕ್ತರ ನಡೆ ವಲಯದ ಕಡೆ ಕಾರ್ಯಕ್ರಮದಲ್ಲಿ ದೂರುಗಳ ಸರಮಾಲೆ ಬಂದಿದ್ದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಭೇಟಿ ಕೊಟ್ಟಿದ್ದ ವೇಳೆ ಜನ ಕಂಪ್ಲೇಂಟ್ ರಾಶಿ ಹೇಳಿದ್ದಾರೆ. ಈ ವೇಳೆ ಸಾರ್ವಜನಿಕರಿಂದ ಹಲವು ದೂರುಗಳು ಕೇಳಿ ಬಂದಿವೆ..

ಪ್ರಮುಖ ಲಿಸ್ಟ್ ಹೇಳೋದಾದ್ರೆ ಬೈಯ್ಯಪ್ಪನಹಳ್ಳಿ ಬಳಿ ಇರುವ ಸ್ಕೈವಾಕ್ ಬಳಕೆಯಾಗುತ್ತಿಲ್ಲ. ಅದನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಲು ಮನವಿ ಮಾಡಿದ್ರು. ಬೆಮೆಲ್ ಲೇಔಟ್ ನಲ್ಲಿ ಅನಧಿಕೃತ ಕಟ್ಟಡಗಳ ನಿರ್ಮಾಣ ಹೆಚ್ಚಾಗಿದ್ದು, ಅದನ್ನು ನಿಯಂತ್ರಿಸಲು ಮನವಿ ಮಾಡಲಾಯಿತು.

ಎ. ನಾರಾಯಣನಪುರದಲ್ಲಿ ರಸ್ತೆ ಬದಿ ಚರಂಡಿಗಳಲ್ಲಿ ಹೂಳೆತ್ತಲು ಮನವಿ ಮಾಡಲಾಗಿದೆ. ಇ-ಖಾತಾ ಪಡೆಯಲು ಸಮಸ್ಯೆಯಾಗುತ್ತಿದ್ದು, ಕೂಡಲೆ ಇ-ಖಾತಾ ಸಿಗುವಂತೆ ಮನವಿ ಮಾಡಲಾಗಿದೆ. ಬಳಗೆರೆ ರಸ್ತೆ ತುಂಬಾ ಹಾಳಾಗಿದ್ದು, ಅದನ್ನು ಕೂಡಲೆ ದುರಸ್ಥಿ ಮಾಡಲು ಮನವಿ ಮಾಡಿದ್ದು,ಕೆ.ಆರ್ ಪುರ ವ್ಯಾಪ್ತಿಯಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣ ಮಾಡಿಕೊಡಲು ಮನವಿ ಮಾಡಲಾಗಿದೆ. ಜೊತೆಗೆ ಎ ಹಾಗೂ ಬಿ ನಾರಾಯಣಪುರದಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಮನವಿ ಮಾಡಿದ್ದುಸಮುದಾಯ ನಾಯಿಗಳಿಗೆ ಆಹಾರ ನೀಡುವುದಕ್ಕೆ ಸ್ಥಳೀಯರಿಂದ ಸಮಸ್ಯೆಯಾಗುತ್ತಿದ್ದು, ಅವರ ಮೇಲೆ ಕ್ರಮ ಕೈಗೊಳ್ಳಲು ಮನವಿ ಮಾಡಲಾಗಿದೆ. ಸಂತೆ ಮೈದಾನದಲ್ಲಿ ಬಸ್ ನಿಲ್ದಾಣ ಒತ್ತುವರಿ ಮಾಡಿಕೊಂಡಿದ್ದು, ಅದನ್ನು ತೆರವುಗೊಳಿಸಲು ಮನವಿ ಮಾಡಲಾಗಿದೆ. ಆರ್.ಹೆಚ್.ಬಿ ಕಾಲೋನಿ ಬಳಿ ಪಾರ್ಕ್ ಒತ್ತುವರಿಯಾಗಿರುವುದನ್ನು ತೆರವುಗೊಳಿಸಲು ಮನವಿ ಮಾಡಲಾಯಿತು.

Edited By : Nagaraj Tulugeri
Kshetra Samachara

Kshetra Samachara

21/12/2024 05:42 pm

Cinque Terre

256

Cinque Terre

0

ಸಂಬಂಧಿತ ಸುದ್ದಿ