ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರೋಡ್ ರೇಜ್ ಪ್ರಕರಣಕ್ಕೆ ಕೊನೆ ಯಾವಾಗ?- ರೌಡಿಸಂಗೆ ಸಾರ್ವಜನಿಕರು ಕಿಡಿ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರೋಡ್ ರೇಜ್ ಪ್ರಕರಣಕ್ಕೆ ಕ್ಲೈಮ್ಯಾಕ್ಸ್ ಸಿಗುವ ಲಕ್ಷಣ ಕಾಣಿಸ್ತಾ ಇಲ್ಲ. ನಡುರಸ್ತೆಯಲ್ಲಿಯೇ ಕಿರಿಕ್ ಮಾಡಿಕೊಂಡ ಬಿಎಂಟಿಸಿ ಚಾಲಕನ ವೀಡಿಯೊ ವೈರಲ್ ಆಗ್ತಿದೆ.

ಬಿಎಂಟಿಸಿ ಡ್ರೈವರ್ಸ್ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ. ಕಾರು ಡ್ರೈವರ್ vs ಬಿಎಂಟಿಸಿ ಚಾಲಕನ ನಡುವೆ ರಸ್ತೆಯಲ್ಲಿ ವಾಗ್ಯುದ್ಧ ಶುರು ಆಗಿದ್ದು, ಅವಾಚ್ಯ ಶಬ್ದಗಳಿಂದ ಪರಸ್ಪರ ನಿಂದನೆ ಮಾಡಿಕೊಂಡು ಕಿರಿಕ್ ಮಾಡಿಕೊಂಡಿದ್ದಾರೆ. ವೋಲ್ವೋ ಬಸ್ ನಲ್ಲಿ ಪ್ಯಾಸೆಂಜರ್ ಇದ್ರೂ ನಡುರಸ್ತೆಯಲ್ಲಿ ಅಮ್ಮ, ಅಕ್ಕ ಅಂತ ಗಲಾಟೆ ಮಾಡಿದ್ದಾರೆ.

ಬಿಎಂಟಿಸಿ ರೌಡಿ ಚಾಲಕರು ಅಂತ x ನಲ್ಲಿ ಸಾರ್ವಜನಿಕರು ಲೇವಡಿ ಮಾಡಿದ್ದಾರೆ. KA 57F 1262 ಬಿಎಂಟಿಸಿ ಬಸ್ ಡ್ರೈವರ್ ಕಿರಿಕ್ ಮಾಡಿಕೊಂಡ ದೃಶ್ಯ ವೈರಲ್ ಆಗ್ತಿದೆ.

Edited By : Vinayak Patil
PublicNext

PublicNext

18/09/2024 10:09 pm

Cinque Terre

22.03 K

Cinque Terre

0

ಸಂಬಂಧಿತ ಸುದ್ದಿ