ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ : ಅಯೋಧ್ಯಾ ರಾಮಲಲ್ಲಾ ಹೋಲುವ ಗಣೇಶನ ಕೂರಿಸಿದ ಕಲಘಟಗಿ ಪಟ್ಟಣದ ನಿವಾಸಿ

ಕಲಘಟಗಿ : ಗಣೇಶ ಹಬ್ಬ ಬಂದ್ರೆ ಸಾಕು ಮನೆಯಲ್ಲಿ ಸಂಭ್ರಮ ಸಡಗರ. ಕುಟುಂಬಸ್ಥರು ವಿವಿಧ ರೀತಿಯ ಅಲಂಕಾರ ಮಾಡಿ ಗಣಪನನ್ನು ಕೂರಿಸೋದನ್ನ ತಾವೆಲ್ಲರೂ ಕಾಣಬಹುದು.

ಅದೇ ರೀತಿ ಕಲಘಟಗಿ ಪಟ್ಟಣದ ನಿವಾಸಿಯಾದ ಕಿರಣ ದಯವಜ್ಞ ಕುಟುಂಬಸ್ಥರು ಪ್ರತಿವರ್ಷ ವಿವಿಧ ರೀತಿಯ ಅಲಂಕಾರ ಹಾಗೂ ಗಣೇಶನ ಮೂರ್ತಿಯನ್ನು ಇಟ್ಟು ಪೂಜೆ ಮಾಡುತ್ತಾರೆ.

ಈ ವರ್ಷವೂ ಕೂಡ ಕುಟುಂಬಸ್ಥರು ಕೂಡಿ ತರ್ಮಾಕೂಲ್ ನಿಂದ್ ಅಯೋಧ್ಯಾ ಶ್ರೀ ರಾಮ ಮಂದಿರ ದೇವಸ್ಥಾನ ಮಾಡಿದ್ದು ಶ್ರೀ ರಾಮಲಲ್ಲಾ ತದ್ರೂಪಿ ಗಣೇಶ ಮೂರ್ತಿಯನ್ನು ಇಟ್ಟಿದ್ದಾರೆ .

ಪುಣೆ ಇಂದ ತರಿಸಿರುವ ಈ ಮೂರ್ತಿಯು ಅಯೋಧ್ಯೆಯ ಶ್ರೀ ರಾಮಲಲ್ಲಾ ಮೂರ್ತಿಯನ್ನೇ ಹೋಲುತ್ತಿದ್ದು, ಈ ಒಂದು ಗಣೇಶನ ಮೂರ್ತಿಯನ್ನು ನೋಡಿದ ಜನರು ಅಯೋಧ್ಯೆ ರಾಮನ ದರ್ಶನ ಮಾಡಿದ ಹಾಗೆ ಆಗುತ್ತಿದೆ ಎಂದು ತಿಳಿಸುತ್ತಿದ್ದಾರೆ.

ಏನೇ ಆಗಲಿ ಈ ಒಂದು ಕುಟುಂಬಸ್ಥರು ಪ್ರತಿ ವರ್ಷವೂ ವಿವಿಧ ದೇವಸ್ಥಾನದ ಒಂದು ವಿಶಿಷ್ಟತೆಯ ಗಣೇಶನನ್ನು ಕೂರಿಸುತ್ತಾ ಬಂದಿದ್ದು ವಿಶೇಷವಾಗಿದ್ದು ಆ ದೇವರ ಆಶೀರ್ವಾದ ಅವರ ಕುಟುಂಬಸ್ಥರ ಮೇಲೆ ಸದಾ ಇರಲಿ ಎಂದು ಕೇಳಿಕೊಳ್ಳುತ್ತೇವೆ.

ಉದಯ ಗೌಡರ, ಪಬ್ಲಿಕ್ ನೆಕ್ಸ್ಟ್, ಕಲಘಟಗಿ

Edited By : Suman K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

14/09/2024 12:58 pm

Cinque Terre

36.12 K

Cinque Terre

0

ಸಂಬಂಧಿತ ಸುದ್ದಿ