ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪರೀಕ್ಷೆಯಲ್ಲಿ ಫೇಲ್‌, ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ, ಪ್ರಸಾದನಿಗೆ ಪ್ರಸಾದ ಕರುಣಿಸದ ನಾಗಶೆಟ್ಟಿಕೊಪ್ಪದ ಹನುಮಪ್ಪ

ಹುಬ್ಬಳ್ಳಿ: ಆತ ಮನೆಗೆ ಒಬ್ಬನೇ ಮುದ್ದಿನ ಮಗ ಮಗನಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ ಮಗನನ್ನು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯನ್ನಾಗಿ ಮಾಡಬೇಕು ಅಂತಾ ಕನಸನ್ನು ಕಟ್ಟಿಕೊಂಡಿದ್ದರು.ಮಗನ ವಿದ್ಯಾಭ್ಯಾಸಕ್ಕೆ ಸಾಲ ಸೋಲ ಮಾಡಿ ಉನ್ನತ ಕೋರ್ಸ್ ಹಚ್ಚಿದ್ದರು. ಆದ್ರೆ ಮಗನಿಗೆ ಓದು ತಲೆಗೆ ಹೋಗ್ತಿರಲಿಲ್ಲ. ಹೀಗಾಗಿ ತನ್ನ ಏರಿಯಾದಲ್ಲಿನ ಹನುಮಂತ ದೇವಸ್ಥಾನಕ್ಕೆ ಹೋಗಿ ನನಗೆ ಓದೆ ತಲೆಗೆ ಹೋಗ್ತಿಲ್ಲ ನೀನೇ ದಾರಿ ತೋರಿಸು ಅಂತಾ ಬೇಡಿಕೊಳ್ಳುತ್ತಿದ್ದನಂತೆ. ಆದ್ರೆ ಆತ ತೆಗೆದುಕೊಂಡ ದುಡುಕಿನ ನಿರ್ಧಾರ ಮಾತ್ರ ತಂದೆ ತಾಯಿಯ ಆಸೆಗೆ ತಣ್ಣೀರು ಎರಚಿ ಇದೀಗ ಬಾರದ ಲೋಕಕ್ಕೆ ಹೋಗಿದ್ದಾನೆ. ಹಾಗಾದ್ರೆ ತಂದೆ-ತಾಯಿಗೆ ಮಗ ಮಾಡಿದ ಮೋಸ ಎಂತದ್ದು ಅಂತೀರಾ ಈ ಸ್ಟೋರಿ ನೋಡಿ.

ಹೀಗೆ ಫೋಟೋದಲ್ಲಿ ಕಾಣುತ್ತಿರೋ ಈತನ ಹೆಸರು ಪ್ರಸಾದ ಹುಲ್ಲಂಬಿ ಅಂತಾ. ವಯಸ್ಸು ಕೇವಲ 18. ಧಾರವಾಡದಲ್ಲಿ NTTF ಮಾಡ್ತಿದ್ದ ಈತ ಗಣೇಶನ ಹಬ್ಬಕ್ಕೆಂದು ಮನೆಗೆ ಬಂದಿದ್ದ.ಮನೆಯಲ್ಲಿ ಎಲ್ಲರ ಜೊತೆ ಸೇರಿ ಹಬ್ಬವನ್ನು ಮಾಡಿದ್ದ.ನಿನ್ನೇ ರಾತ್ರಿ ತಾಯಿಯ ಜೊತೆ ಊಟ ಮಾಡಿ ಅಮ್ಮ ನಾನು ಬೆಳ್ಳಿಗ್ಗೆ ಕಾಲೇಜು ಹೋಗಬೇಕು ಮಲಗ್ತೀನಿ ಅಂತಾ ಹೇಳಿದ್ದಾನೆ.ತಾಯಿ ಬೆಳಗಿನ ಜಾವ ಎದ್ದು ಕಾಲ್ ಮಾಡಿದಾಗ ಪ್ರಸಾದ ಫೋನ್ ರೀಸಿವ್ ಮಾಡಿಲ್ಲ.ಮಗ ಮಲಗಿರಬೇಕು ಅಂತಾ ರೂಮ್'ಗೆ ಹೋಗಿ ನೋಡಿದಾಗ ತಾಯಿಗೆ ಶಾಕ್ ಆಗಿದೆ.ಬೆಳಿಗ್ಗೆ ಕಾಲೇಜು ಹೋಗಬೇಕು ಅಂತಾ ಅಂದಿದ್ದ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಮಗನ ಶವ ಕಂಡು ತಾಯಿ ಕುಸಿದು ಬಿದ್ದಿದ್ದಾಳೆ.

ವಿದ್ಯಾರ್ಥಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಖುದ್ದು ಕಮಿಷನರ್ ಎನ್ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಆತ್ಮಹತ್ಯೆ ಮಾಡಿಕೊಂಡ ಪ್ರಸಾದನ ತಂದೆ ತಾಯಿಯ ಜೊತೆ ಮಾತನಾಡಿ ಅವರಿಗೆ ಧೈರ್ಯವನ್ನು ತುಂಬಿದರು. ಪ್ರಸಾದ ಓದಿನಲ್ಲಿ ಸ್ವಲ್ಪ್ ವೀಕ್ ಇದ್ದ ಹೀಗಾಗಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂಬ ಪ್ರಾಥಮಿಕ ಮಾಹಿತಿ ಇದೀಗ ಲಭ್ಯವಾಗಿದೆ ಅಂತಾ ಕಮಿಷನರ್ ಪ್ರತಿಕ್ರಿಯೆ ನೀಡಿದ್ದು ಹೀಗೆ.

ಮಗ ಚೆನ್ನಾಗಿ ಕಲಿತು ಇಳಿ ವಯಸ್ಸಿನಲ್ಲಿ ನಮಗೆ ಆಸರೆ ಯಾಗ್ತಾನೆ ಅಂತಾ ಕನಸ್ಸು ಕಂಡಿದ್ದ ಪ್ರಸಾದ ತಂದೆ ತಾಯಿಗೆ ಮೋಸ ಮಾಡಿದ್ದಾನೆ.ಅಮ್ಮಾ ನನಗೆ ಓದು ತಲೆಗೆ ಹೋಗ್ತಿಲ್ಲ ಅಂತಾ ತಾಯಿಯ ಮುಂದೆ ಹೇಳ್ಕೊಂಡು.ನಾನು ಬೇರೆ ಏನಾದ್ರು ಮಾಡ್ತೀನಿ ನನಗೆ ಈ ಕೋರ್ಸ್ ಬೇಡಾ ಅಂತಾ ಹೇಳೋದು ಬಿಟ್ಟು ಆತ್ಮಹತ್ಯೆ ಮಾಡಿಕೊಂಡು,ತಂದೆ ತಾಯಿ ಜೀವನ ಪೂರ್ತಿ ಕೊರಗೋ ರೀತಿಯಲ್ಲಿ ಮಾಡಿದ ಪ್ರಸಾದನನ್ನು ನಾಗಶೆಟ್ಟಿಕೊಪ್ಪದ ಹನುಮಂತ ಕೂಡ ಕ್ಷಮಿಸಲಾರ.

ವಿನಯ್ ರೆಡ್ಡಿ, ಕ್ರೈಂ ಬ್ಯುರೋ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ

Edited By : Somashekar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

13/09/2024 01:21 pm

Cinque Terre

54.1 K

Cinque Terre

8

ಸಂಬಂಧಿತ ಸುದ್ದಿ