ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಹರ್ಡೇಕರ್ ಮಂಜಪ್ಪನವರ ಸಮಗ್ರ ಸಾಹಿತ್ಯವನ್ನು ಸರ್ಕಾರ ಹೊರತರಬೇಕು - ನಿಜಗುಣಾನಂದ ಸ್ವಾಮೀಜಿ

ಧಾರವಾಡ: ಕರ್ನಾಟಕದ ಗಾಂಧಿ ಎಂದೇ ಕರೆಯಲ್ಪಡುವ ಹರ್ಡೇಕರ್ ಮಂಜಪ್ಪನವರ ಸಮಗ್ರ ಸಾಹಿತ್ಯವನ್ನು ರಾಜ್ಯ ಸರ್ಕಾರ ಹೊರತರಬೇಕು ಎಂದು ಮುಂಡರಗಿಯ ನಿಜಗುಣಾನಂದ ಸ್ವಾಮೀಜಿ ಹೇಳಿದರು.

ಧಾರವಾಡದ ಸೃಜನಾ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಸಚಿವ ಸಂತೋಷ ಲಾಡ್ ಅವರ ಪುತ್ರ ಕರಣ್ ಲಾಡ್ ಅವರ ಕನ್ನಡ ಅನುವಾದಿತ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

1924ರಂದು ಬೆಳಗಾವಿಗೆ ಕಾಂಗ್ರೆಸ್ ಸಮಾವೇಶಕ್ಕೆಂದು ಮಹಾತ್ಮ ಗಾಂಧೀಜಿ ಅವರು ಬಂದಾಗ ಅವರಿಗೆ ಹರ್ಡೇಕರ್ ಮಂಜಪ್ಪನವರು ಬಸವಣ್ಣನವರ ಪುಸ್ತಕ ಕೊಟ್ಟು ಬಸವಣ್ಣನವರನ್ನು ಪರಿಚಯ ಮಾಡಿಕೊಟ್ಟಿದ್ದರು. ಕಾಂಗ್ರೆಸ್ ಸಂಸ್ಥಾಪನಾ ದಿನಕ್ಕೆ 100 ವರ್ಷ ಗತಿಸಿದೆ. ಕಾಂಗ್ರೆಸ್ ಸಂಸ್ಥಾಪನಾ ದಿನ ಮಾಡುವುದಾದರೆ ಆ ಸಂದರ್ಭದಲ್ಲಿ ಹರ್ಡೇಕರ್ ಮಂಜಪ್ಪನವರ ಸಮಗ್ರ ಸಾಹಿತ್ಯವನ್ನು ಹೊರತರಲು ಸಚಿವ ಸಂತೋಷ ಲಾಡ್ ಅವರು ಸರ್ಕಾರಕ್ಕೆ ಒತ್ತಾಯ ಮಾಡಬೇಕು ಎಂದರು.

ಮನುಷ್ಯ ಜೀವನದಲ್ಲಿ ನಗು ನಗುತ್ತ ಇರಬೇಕು. ಸುಂದರವಾದ ಹಾಡುಗಳನ್ನು ಹಾಡಬೇಕು ಎಂದು ಬಾನಲ್ಲೂ ನೀನೇ ಭುವಿಯಲ್ಲೂ ನೀನೆ ಎಂಬ ಸಿನಿಮಾ ಹಾಡನ್ನು ಸ್ವಾಮೀಜಿ ಹಾಡಿ ಎಲ್ಲರೂ ನಗೆಗಡಲಲ್ಲಿ ತೇಲುವಂತೆ ಮಾಡಿದರು.

ಕರಣ್ ಲಾಡ್ ಬರೆದಿರುವ ಪುಸ್ತಕವನ್ನು ಓದುತ್ತ ಹೋದರೆ ಅವರು ಅದನ್ನು ಸಣ್ಣ ವಯಸ್ಸಿನಲ್ಲಿ ಬರೆದಂತೆ ಕಾಣುತ್ತಿಲ್ಲ. ಆತನಲ್ಲಿರುವ ಕೌಶಲ್ಯ ದೊಡ್ಡಮಟ್ಟಕ್ಕೆ ಬೆಳೆದಾಗ ಬರೆದಂತೆ ಕಾಣುತ್ತಿದೆ. ಈಗಿನ ಸಮಾಜದಲ್ಲಿ ದುರ್ಜನರಿಗಿಂತ ಸಜ್ಜನರೇ ಕೆಟ್ಟವರಾಗುತ್ತಿದ್ದಾರೆ ಎಂದರು.

ಸಮಾಜದಲ್ಲಿ ಈಗ ನಮ್ಮಂತ ಸ್ವಾಮೀಜಿಗಳು ಮಾತನಾಡುವುದೇ ಕಷ್ಟವಾಗಿದೆ. ಭಯದ ವಾತಾವರಣ ಸೃಷ್ಟಿಯಾಗಿದೆ. ಏನಾದರೂ ಮಾತನಾಡಿದರೆ ಕೊಂದು ಬಿಡುತ್ತೇವೆ ಎನ್ನುತ್ತಾರೆ. ನಮ್ಮನ್ನು ಸಮಾಜದ್ರೋಹಿ, ದೇವರ ವಿರೋಧಿ ಎನ್ನುತ್ತಾರೆ. ಹೀಗಾಗಿ ಎಲ್ಲರೂ ಬರೆಯುವ ಹವ್ಯಾಸ ರೂಢಿಸಿಕೊಳ್ಳಬೇಕು. ಸುಮ್ಮನೇ ಏನಾದರೂ ಬರೆಯುತ್ತಿರಬೇಕು. ನಾನು ಹಾಕಿದ ಸಸಿ ಬೆಳೆಯಿತು ನಾನೇಕೆ ಬೆಳೆಯಲಿಲ್ಲ. ಆ ಮರವನ್ನು ಲೋಕಾಯುಕ್ತರು ಏಕೆ ಹಿಡಿಯಲಿಲ್ಲ. ಪರಪ್ಪನ ಅಗ್ರಹಾರಕ್ಕೆ ಏಕೆ ಕೊಂಡೊಯ್ಯಲಿಲ್ಲ ಎಂದು ಸುಮ್ಮನೆ ಏನಾದರೂ ಬರೆಯುತ್ತಿರಬೇಕು ಎಂದರು.

ಕೆಲವರು ದೇವರಿಗಾಗಿ ಊಟ ಬಿಟ್ಟಿದ್ದೇವೆ ಎನ್ನುತ್ತಾರೆ. ತುಪ್ಪ, ಹುಗ್ಗಿ, ಉಪ್ಪು ಬಿಟ್ಟಿದ್ದೇವೆ ಎನ್ನುತ್ತಾರೆ ಏಕೆ ಎಂದು ಕೇಳಿದರೆ ದೇವರಿಗೆ ಉಪವಾಸ ಮಾಡುತ್ತಿದ್ದೇವೆ ಎನ್ನುತ್ತಾರೆ. ಅದಕ್ಕೆ ಒಬ್ಬ ಕವಿ ಹೇಳುತ್ತಾನೆ, ಉಪ್ಪು ಬಿಟ್ಟವರನ್ನು ಕಂಡೆ, ತುಪ್ಪ ಬಿಟ್ಟವರನ್ನು ಕಂಡೆ ತಪ್ಪು ಬಿಟ್ಟವರನ್ನು ಕಾಣಲಿಲ್ಲ ಎಂದು ಆ ಕವಿ ಬರೆಯುತ್ತಾನೆ ಎಂದರು.

Edited By : Suman K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

11/09/2024 05:28 pm

Cinque Terre

46.75 K

Cinque Terre

0

ಸಂಬಂಧಿತ ಸುದ್ದಿ