ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಭಾನುವಾರ ಸಂಜೆಯಿಂದ ಏಕಾಏಕಿ ಮಳೆ ಅಬ್ಬರಿಸಿದೆ. ವರ್ಷದ ಮಳೆಗಾಲದಲ್ಲೂ ಸುರಿಯದಷ್ಟು ದೊಡ್ಡ ಪ್ರಮಾಣದ ಮಳೆ ಸುರಿದು ಜನಜೀವನ ಅಸ್ತವ್ಯಸ್ತ್ಯಗೊಂಡಿದೆ.
ಕಳೆದ ಮೂರ್ನಾಲ್ಕು ದಿನದಿಂದ ಮೋಡ ಕವಿದ ವಾತಾವರಣವಿದ್ದು, ಆಗಾಗ ಸಣ್ಣ ಮಳೆ ಬರುವುದು ಬಿಟ್ಟರೆ ದೊಡ್ಡ ಮಳೆ ಆಗಿರಲಿಲ್ಲ. ಭಾನುವಾರ ಮಾತ್ರ ಸಂಜೆಯಿಂದ ಏಕಾಏಕಿ ಒಂದೇ ಸಮನೆ ಸುರಿದ ಮಳೆಗೆ ಹಳ್ಳಗಳು ತುಂಬಿ ಹರಿದಿದ್ದು, ತೋಟ, ಗದ್ದೆ, ಶಾಲೆಗಳ ಅಂಗಳ, ಹೊಳೆ ತೀರದ ಮನೆಗಳ ಬಾಗಿಲಿನವರೆಗೂ ನೀರು ನುಗ್ಗಿದೆ. ಒಂದೇ ಸಮನೆ ಸುರಿದ ಮಳೆಗೆ ವಾಹನ ಸವಾರರಿಗೂ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ರಾತ್ರಿಯೂ ಮುಂದುವರಿದಿರುವ ಮಳೆಯಿಂದಾಗಿ ಮತ್ತೆ ನೆರೆ ಭೀತಿ ಎದುರಾಗಿದೆ. ಇತ್ತ ಹೊನ್ನಾವರ ಪಟ್ಟಣದ ಅಶುರ್ಖಾನಗಲ್ಲಿ ಅಲ್ಲಾಬಕ್ಷ ಇಸುಬ್ ಸಾಬ್ ರವರ ವಾಸ್ತವ್ಯದ ಮಣ್ಣಿನ ಮನೆಯ ಗೋಡೆ ಹಾಗೂ ಚಾವಣಿ ಗಾಳಿ ಮಳೆಗೆ ಕುಸಿದು ತೀವ್ರ ಹಾನಿಯಾಗಿದೆ.
PublicNext
12/09/2022 07:47 am