ಸಿದ್ದಾಪುರ : ತಾಲೂಕಿನಲ್ಲಿ ಎಲ್ಲೆಲ್ಲಿ ಮಳೆಯಿಂದ ಕಟಾವು ಮಾಡಿದ ಭತ್ತದ ಗದ್ದೆಗಳು ನಾಶವಾಗಿದೆ ಕಂದಾಯ, ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಕಳುಹಿಸಬೇಕು, ರೈತರಿಗೆ ನಷ್ಟವಾದ ಬೆಳೆಗೆ ವಾರ್ಷಿಕ ಆದಾಯ ಲೆಕ್ಕಾ ಹಾಕಿ ಪರಿಹಾರ ಒದಗಿಸಿಕೊಡುವಂತೆ ಬಿಜೆಪಿ ಮಂಡಲ ಅಧ್ಯಕ್ಷ ಎಂ ಕೆ ತಿಮ್ಮಪ್ಪ ಒತ್ತಾಯ ಮಾಡಿದ್ದಾರೆ.
ಈ ವರ್ಷ ನಾಟಿ ಮಾಡಿದ ನಂತರ ಜುಲೈನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಗದ್ದೆಗಳು ಕೊಚ್ಚಿ ಹೋಗಿ ಎರಡೆರಡು ಬಾರಿ ನಾಟಿ ಮಾಡಿದ್ದೇವೆ, ಬೆಳೆಯು ಉತ್ತಮವಾಗಿತ್ತು ಆದರೆ ಕಟಾವು ಮಾಡಿದ ಮಾರನೇ ದಿನದಿಂದ ಒಂದು ವಾರ ಮಳೆ ಸುರಿದುದರಿಂದ ವರ್ಷದ ಬೆಳೆಯು ಸಂಪೂರ್ಣ ನೆಲ ಕಚ್ಚಿ ಹೋಗಿದೆ ಬೆಳೆಯನ್ನೇ ನಂಬಿಕೊಂಡಿದ್ದ ನಮಗೆ ದಿಕ್ಕು ತೋಚದಂತಾಗಿದೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ನೆಜ್ಜುರ್ ಭಾಗದ ರೈತರು ಮನವಿ ಮಾಡಿಕೊಂಡರು.
ಗಣಪತಿ ಚೌಡ ಮಡಿವಾಳ, ನಸರುಲ್ಲ ಖಾನ್, ಉಮರ್ ಖಾನ್, ಪಕೀರ ರಾಮ ಬೋವಿ, ಕನ್ನ ದ್ಯಾವ ಬೋವಿ, ಗಣಪತಿ ತಿಪ್ಪ ನಾಯ್ಕ, ಮಂಜ ತಿಪ್ಪ ನಾಯ್ಕ್, ಗೌರಿ ದುರ್ಗಾ ಮಡಿವಾಳ ಅನಂತ ನಾರಾಯಣ ಬೋವಿ ಇನ್ನು ಹಲವಾರು ರೈತರ ಗದ್ದೆಗಳು ನಾಶವಾಗಿವೆ ಎಂದು ರೈತರು ತಿಳಿಸಿದ್ದಾರೆ.
Kshetra Samachara
09/12/2024 04:14 pm