ಭಟ್ಕಳ : ಇಲ್ಲಿನ ನೇತ್ರಾಣಿ ದ್ವೀಪದ ಬಳಿ ಮೀನುಗಾರಿಕೆನಡೆಸುತ್ತಿದ್ದ ವೇಳೆ ಅರಬ್ಬಿ ಸಮುದ್ರದಲ್ಲಿ ನೀರಿಗೆ ಬಿದ್ದ ಮೀನುಗಾರ ಸಾವನ್ನಪ್ಪಿದ ಘಟನೆ ನಡೆದಿದೆ.
ಮಾಸ್ತಿ ಶುಕ್ರ ಗೊಂಡ (26) ಮೃತ ಮೀನುಗಾರ. ಭಟ್ಕಳ ತಾಲೂಕಿನ ಹೆಬಳೆಯ ಸಂಪನಕೇರಿ ನಿವಾಸಿ ಎಂದು ತಿಳಿದುಬಂದಿದೆ. ಮಲ್ಪೆಯ ಸುಶೀಲಮ್ಮ ಹೆಸರಿನ ಬೋಟಿನಲ್ಲಿ ಕೆಲಸ ಮಾಡುತ್ತಿದ್ದ. ಮೀನುಗಾರಿಕೆ ನಡೆಸುತ್ತಿರುವ ಸಂದರ್ಭದಲ್ಲಿ ಕೆಳಕ್ಕೆ ಬಿದ್ದು ನಾಪತ್ತೆಯಾಗಿದ್ದ. ತಕ್ಷಣ ವೈರಲೆಸ್ ಮೂಲಕ ಸಂದೇಶ ರವಾನಿಸಿದಾಗ ಬಲೆ ಹಾಕಿ ಜಾಲಾಡಿದ್ದಾರೆ. ಹನುಮಾನ್ ಬೋಟ್ ಮೀನುಗಾರರು ಆಳ ಸಮುದ್ರಕ್ಕೆ ಜಿಗಿದು ಮೃತದೇಹ ಮೇಲಕ್ಕೆ ಎತ್ತಿದ್ದಾರೆ.
Kshetra Samachara
08/12/2024 04:02 pm