ಕಾರವಾರ: ನಗರದ ಮಾಲಾದೇವಿ ಮೈದಾನದ ಬಳಿಯ ಚರಂಡಿಗೆ ಬಿದ್ದಿದ್ದ ಹಸುವೊಂದನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿದ್ದಾರೆ.
ನಗರದ ಕೋಡಿಭಾಗ ರಸ್ತೆಗೆ ಹೊಂದಿಕೊಂಡಂತೆ ಇರುವ ಮಾಲಾದೇವಿ ಮೈದಾನದ ಬದಿಯಲ್ಲಿ ಚರಂಡಿಗೆ ಹಾಕಲಾಗಿದ್ದ ಕಾಂಕ್ರಿಟ್ ಸ್ಲಾಬ್ ಗಳು ಕುಸಿದಿವೆ. ಇದೇ ಸ್ಲಾಬ್ ಗಳ ಮೇಲೆ ನಡೆದುಕೊಂಡು ಬರುತ್ತಿದ್ದ ವೇಳೆ ಸ್ಲ್ಯಾಬ್ ಗಳ ಮದ್ಯೆ ಇರುವ ರಂಧ್ರದಲ್ಲಿ ಹಸುವಿನ ಕಾಲು ಸಿಲುಕಿಕೊಂಡಿದೆ. ಬಳಿಕ ಒದ್ದಾಡುವಾಗ ಸ್ಲಾಬ್ ಕುಸಿದು, ಅದರೊಂದಿಗೆ ಹಸುವೂ ಕಿರಿದಾದ ಚರಂಡಿಯಲ್ಲಿ ಬಿದ್ದಿದೆ.
ತೀರ ಚಿಕ್ಕ ಜಾಗದಲ್ಲಿ ಬಿದ್ದು ಒದ್ದಾಡುವಾಗ ಮೈದಾನದಲ್ಲಿ ಆತವಾಡುತ್ತಿದ್ದ ಯುವಕರು ಗಮನಿಸಿ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ, ಕಾಂಕ್ರಿಟ್ ಸ್ಲಾಬ್ ನ್ನು ಒಡೆದು ಅದರ ಕಬ್ಬಿಣದ ರಾಡ್ ಗಳನ್ನು ಕಟರ್ ನಿಂದ ಬೇರ್ಪಡಿಸಿ ಹಸುವನ್ನು ರಕ್ಷಣೆ ಮಾಡಿದ್ದಾರೆ.
Kshetra Samachara
09/09/2022 08:14 pm