ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಪ್ರಿಯಕರನಿಂದ ನೊಂದ ಪ್ರಿಯತಮೆ ಕಾಳಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನ!!

ಕಾರವಾರ (ಉತ್ತರಕನ್ನಡ): ಪ್ರೀತಿ- ಪ್ರೇಮದ ವಿಷಯಕ್ಕೆ ನೊಂದು ಯುವತಿಯೊಬ್ಬಳು ಕಾರವಾರದ ಕಾಳಿ ನದಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಕಾರವಾರ ತಾಲೂಕಿನ ದೇವಭಾಗದ 18ರ ಹರೆಯದ ಯುವತಿಯೊಬ್ಬಳು ಪ್ರಿಯಕರನಿಂದ ಯಾವುದೋ ವಿಷಯಕ್ಕೆ ನೊಂದು ಕಾಳಿ ನದಿಯ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿಷಯ ತಿಳಿದ ತಕ್ಷಣವೇ ಸಮೀಪದ ಕಾಳಿ ರಿವರ್ ಗಾರ್ಡನ್‌ನ ಲೈಫ್ ಗಾರ್ಡ್‌ಗಳು ತಮ್ಮ ಬೋಟುಗಳಲ್ಲಿ ತೆರಳಿ ಯುವತಿಯನ್ನ ರಕ್ಷಿಸಿದ್ದಾರೆ.

ಸದ್ಯ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ‌. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagesh Gaonkar
PublicNext

PublicNext

12/10/2022 10:52 pm

Cinque Terre

53.93 K

Cinque Terre

1

ಸಂಬಂಧಿತ ಸುದ್ದಿ