ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಸರ್ಕಾರಿ ಬಸ್‌ನ ಬ್ರೇಕ್ ಫೇಲ್; ಮೂರು ಬೈಕ್, ಕಾರು, ಬಸ್ ಗಳಿಗೆ ಡಿಕ್ಕಿ

ಕಾರವಾರ (ಉತ್ತರಕನ್ನಡ): ಹೊನ್ನಾವರ ಪಟ್ಟಣದ ಬಸ್ ನಿಲ್ದಾಣ ಕಡೆ ಸಾಗುವ ಕೋರ್ಟ್ ರಸ್ತೆಯಲ್ಲಿ ಭಟ್ಕಳ ಡಿಪೋಗೆ ಸೇರಿದ ಗೇರುಸೊಪ್ಪಾ- ಹೊನ್ನಾವರ ಬಸ್ ಬ್ರೇಕ್ ಫೇಲ್ ಆಗಿ ಎದುರುಗಡೆ ಚಲಿಸುತ್ತಿದ್ದ ಒಂದು ಬೈಕ್ ಮತ್ತು ಪಕ್ಷದಲ್ಲಿ ನಿಂತಿದ್ದ ಎರಡು ಬೈಕ್ ಗೆ ಡಿಕ್ಕಿ ಹೊಡೆದು, ಅದರ ಮುಂದೆ ಬಸ್ ನಿಲ್ದಾಣಕ್ಕೆ ಸಾಗುತ್ತಿದ್ದ ಪಣಜಿ- ಕಾರವಾರ ಬಸ್ ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಪಣಜಿ ಬಸ್ ಮುಂಭಾಗದಲ್ಲಿ ತೆರಳುತ್ತಿದ್ದ ಕಾರಿನ ಹಿಂಭಾಗಕ್ಕೂ ಡಿಕ್ಕಿಯಾದರೂ ದೊಡ್ಡ ಅನಾಹುತ ತಪ್ಪಿದೆ.

ಇಕ್ಕಟ್ಟಾದ ಸ್ಥಳದಲ್ಲಿ ಹರಸಾಹಸದಿಂದ ಬಸ್ ಚಲಿಸುತ್ತಿತ್ತು. ಈ ನಡುವೆ ಬ್ರೇಕ್ ಫೇಲ್ ಆಗಿರುವುದರಿಂದ ಈ ಅನಾಹುತ ಸಂಭವಿಸಿದ್ದು, ಪಣಜಿ ಬಸ್ ನಿರ್ವಾಹಕ ಹಾಗೂ ಈರ್ವರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಮಹಿಳಾ ಪ್ರಯಾಣಿಕರೋರ್ವರನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.‌ ಐದಕ್ಕೂ ಹೆಚ್ಚಿನ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಗೇರುಸೊಪ್ಪಾ ಬಸ್ ನಲ್ಲಿ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ ಎಲ್ಲರೂ ಪ್ರಾಣಾಪಯದಿಂದ ಪಾರಾಗಿದ್ದಾರೆ. ಅಪಘಾತ ಸಂಭವಿಸಿದ ಬಳಿಕ ಸ್ಥಳದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ಪರಿಣಾಮ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ಪೊಲೀಸರು ಸಾರ್ವಜನಿಕರ ಸಹಕಾರದ ಮೇರೆಗೆ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ, ಬಸ್ ಬೇರೆ ಮಾರ್ಗದಿಂದ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದ್ದಾರೆ.

Edited By : Manjunath H D
PublicNext

PublicNext

13/10/2022 05:36 pm

Cinque Terre

45.6 K

Cinque Terre

2

ಸಂಬಂಧಿತ ಸುದ್ದಿ