ಸಿದ್ದಾಪುರ : ಕಾರ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಹಿಸಿ ಬೈಕ್ ಸವಾರ ಗಂಭೀರ ಗಾಯಗೊಂಡು ಗಾಯಾಳವನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗುತ್ತಿರುವಾಗ ಗಾಯಗೊಂಡ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ.
ಸುರೇಶ ಹುಚ್ಚ ನಾಯ್ಕ ಸುಂಕತ್ತಿ ಮೃತ ದುರ್ದೈವಿಯಾಗಿದ್ದಾನೆ.
ಸಿದ್ದಾಪುರದ ಹಲಗೇರಿಯಲ್ಲಿ ಗ್ರಾಮ ಒನ್ ನಡೆಸುತ್ತಿದ್ದ ಸುರೇಶ ಸಿದ್ದಾಪುರದಿಂದ ಹಲಗೇರಿ ಕಡೆಗೆ ಹೋಗುತ್ತಿರುವಾಗ ಪಟ್ಟಣ ವ್ಯಾಪ್ತಿಯ ಜೋಗ ರಸ್ತೆಯ ಲಕ್ಷ್ಮಿನಗರ ಬಳಿ ಶುಕ್ರವಾರ ಬೆಳಿಗ್ಗೆ ಘಟನೆ ಸಂಭವಹಿಸಿದೆ. ಮೃತ ಸುರೇಶ ಓರ್ವ ರಾಜ್ಯ ಮಟ್ಟದ ಕ್ರೀಡಾಪಟು ಮತ್ತು ಜಿಲ್ಲೆಗೆ ಮಾದರಿ ಗ್ರಾಮ್ ಒನ್ ನಿರ್ವಹಿಸಿರುವುದಕ್ಕೆ ಪ್ರಶಸ್ತಿಗಳು ಅರಸಿ ಬಂದಿದ್ದವು.
ಇವರ ಅಕಾಲಿಕ ನಿಧನಕ್ಕೆ ಸ್ನೇಹಿತರು ಅಪಾರ ಬಂಧು ಬಳಗ ಸಂತಾಪ ಸೂಚಿಸಿದ್ದಾರೆ. ಮೃತರು ಹೆಂಡತಿ, ಪುತ್ರ ಪುತ್ರಿ ಅಪಾರ ಬಂಧು ಬಳಗವನ್ನ ಅಗಲಿದ್ದಾರೆ.
Kshetra Samachara
06/12/2024 03:21 pm