ಉಡುಪಿ: ಉಡುಪಿ ಜಿಲ್ಲೆಯ ಹಲವೆಡೆ ರವಿವಾರ ರಾತ್ರಿ ವೇಳೆ ಗುಡುಗು ಸಹಿತ ಭಾರೀ ಮಳೆಯಾಗಿದೆ. ಉಡುಪಿ ನಗರ, ಕುಂದಾಪುರ ತಾಲೂಕು, ಕಾರ್ಕಳ, ಕಾಪು ತಾಲೂಕಿನ ಹಲವು ಕಡೆ ಸಿಡಿಲು ಗುಡುಗು ಸಹಿತ ಮಳೆಯಾಗಿದೆ.
ಒಟ್ಟಾರೆ ಕಳೆದ 24 ಗಂಟೆಗಳ ಅವಧಿಯಲ್ಲಿ ಉಡುಪಿ- 2.4ಮಿ.ಮೀ., ಕಾಪು- 6.2ಮಿ.ಮೀ., ಕುಂದಾಪುರ- 0.1ಮಿ.ಮೀ., ಕಾರ್ಕಳ- 8.0ಮಿ.ಮೀ., ಹೆಬ್ರಿ- 5.2ಮಿ.ಮೀ. ಹಾಗೂ ಸರಾಸರಿ 3.0ಮಿ.ಮೀ. ಮಳೆಯಾಗಿದೆ.ಗ್ರಾಮೀಣ ಭಾಗದಲ್ಲಿ ಕೆಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿದ್ದು ಬಿಟ್ಟರೆ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
Kshetra Samachara
11/04/2022 11:18 am