ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಜೈಲಿನಿಂದ ಹೊರಬಂದು ನಾಲ್ಕೇ ದಿನಗಳಲ್ಲಿ ಸರ, ಬೈಕ್‌ಗಳ ಕಳವು - ಸಿಸಿಬಿ ಕೈಗೆ ಸೆರೆಸಿಕ್ಕ ಖದೀಮರು ಮತ್ತೆ ಅಂದರ್

ಮಂಗಳೂರು: ಜೈಲಿನಿಂದ ಹೊರಬಂದ ನಾಲ್ಕೇ ದಿನಗಳಲ್ಲಿ ಎರಡು ಬೈಕ್‌ಗಳನ್ನು ಎಗರಿಸಿ, ಅದೇ ಬೈಕ್‌ನಲ್ಲಿ ಮಹಿಳೆಯರ ಸರಗಳವು ನಡೆಸಿದ ಇಬ್ಬರು ಖತರ್ನಾಕ್ ಖದೀಮರನ್ನು ಸಿಸಿಬಿ ಪೊಲೀಸರು ಕೃತ್ಯ ನಡೆದ 24ಗಂಟೆಗಳೊಳಗೆ ಬಂಧಿಸಿದ್ದಾರೆ.

ಸುರತ್ಕಲ್, ಕೃಷ್ಣಾಪುರ,7ನೇ ಬ್ಲಾಕ್ ನಿವಾಸಿ ಹಬೀಬ್ ಹಸನ್(43) ಬಂಟ್ವಾಳ ತಾಲೂಕಿನ ಬಿ.ಮೂಡ ನಿವಾಸಿ ಉಮ್ಮರ್ ಶಿಯಾಫ್(29) ಬಂಧಿತ ಆರೋಪಿಗಳು.

ಡಿ.6ರಂದು ನರಿಂಗಾನ ಗ್ರಾಮದ ತೌಡುಗೋಳಿ ಅಂಗನವಾಡಿ ಕೇಂದ್ರದ ಅಡುಗೆ ಸಹಾಯಕಿ ಸುಜಿನಾ ಡಿಸೋಜಾ ಅಂಗನವಾಡಿಯಲ್ಲಿ ಕರ್ತವ್ಯದಲ್ಲಿದ್ದ ಸಂದರ್ಭ ಇವರಿಬ್ಬರು ಬೈಕಿನಲ್ಲಿ ಬಂದು, ಮಂಜನಾಡಿಗೆ ಹೋಗುವ ದಾರಿಯ ಬಗ್ಗೆ ವಿಚಾರಿಸಿದ್ದಾರೆ. ದಾರಿಯನ್ನು ಹೇಳಿ, ಅಂಗನವಾಡಿ ಬಾಗಿಲು ಹಾಕುವಷ್ಟರಲ್ಲಿ ಇವರು ಬಾಗಿಲನ್ನು ದೂಡಿ ಅಂಗನವಾಡಿಯೊಳಗೆ ಪ್ರವೇಶಿಸಿ, ಸುಜಿನಾ ಡಿಸೋಜರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಎಳೆದು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿ.9ರಂದು ಕಾರ್ಕಳದ ಬೋಳ ಗ್ರಾಮದ ಸುಂಕಮಾರು- ಮಂಜರಪಲ್ಕೆ ಎಂಬಲ್ಲಿ ಬೈಕ್‌ನಲ್ಲಿ ಬಂದ ಯುವಕ-ಯುವತಿ ರಸ್ತೆಯಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವಸಂತಿ ಎಂಬವರಲ್ಲಿ ಭಾಸ್ಕರ್ ಎಂಬವರ ಮನೆಗೆ ಹೋಗುವ ದಾರಿ ಯಾವುದೆಂದು ಕೇಳಿದ್ದಾರೆ. ಅವರು ಪ್ರತಿಕ್ರಿಯಿಸುತ್ತಿದ್ದಾಗ ಬೈಕ್ ಸವಾರ ವಸಂತಿಯವರ ಚಿನ್ನದ ಸರವನ್ನು ಎಸಗಿರಿಸಿ ಪರಾರಿಯಾಗಿದ್ದರು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ಅಂಗನವಾಡಿ ಕಾರ್ಯಕರ್ತೆಯ ಸರಗಳವು ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಬಗ್ಗೆ ಮಂಗಳೂರು ಸಿಸಿಬಿ ಪೊಲೀಸರು ಸಿಸಿ ಟಿವಿ ಫೂಟೇಜ್‌ಗಳನ್ನು ಸಂಗ್ರಹಿಸಿ ಮಾಹಿತಿ ಸಂಗ್ರಹಿಸುತ್ತಿದ್ದರು. ಆಗ ಈ ಹಿಂದೆ ಹಲವು ಸರಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ 4 ದಿನಗಳ ಹಿಂದೆ ಜಾಮೀನಿನಲ್ಲಿ ಜೈಲಿನಿಂದ ಬಿಡುಗಡೆಗೊಂಡಿದ್ದ ಹಬೀಬ್ ಹಸನ್ ಹಾಗೂ ಆತನ ಸಹಚರ ಈ ಕೃತ್ಯದಲ್ಲಿ ಭಾಗಿಯಾಗಿದ ಖಚಿತ ಮಾಹಿತಿ ದೊರೆತಿದೆ. ಅವರ ಪತ್ತೆಗಾಗಿ ಮಾಹಿತಿ ಸಂಗ್ರಹಿಸುತ್ತಿದ್ದ ಸಂದರ್ಭ, ಅವರು ಮಂಗಳೂರಿನ ಕಾರ್‌ಸ್ಟ್ರೀಟ್ ಬಳಿಯಿರುವ ಮಾಹಿತಿ ದೊರೆತಿದ್ದು, ತಕ್ಷಣ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ ಕಾರ್ಕಳದಿಂದ ಸುಲಿಗೆ ಮಾಡಿದ 17.43 ಗ್ರಾಂ ಚಿನ್ನದ ಸರ, ಸರಗಳವು ಮಾಡಲು ಉಪಯೋಗಿಸಿದ ಕಳವುಗೈದ ಬೈಕ್, ಒಂದು ಚೂರಿಯನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

Edited By : Nagaraj Tulugeri
PublicNext

PublicNext

11/12/2024 09:58 am

Cinque Terre

14.46 K

Cinque Terre

1

ಸಂಬಂಧಿತ ಸುದ್ದಿ