ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಮೂಡ್ಲುಕಟ್ಟೆಯಲ್ಲಿ ಕಾಣಿಸಿಕೊಂಡ ಅಪರೂಪದ ನೀರುನಾಯಿಗಳು

ಉಡುಪಿ: ಕುಂದಾಪುರ ತಾಲ್ಲೂಕಿನ ಮೂಡ್ಲುಕಟ್ಟೆಯ ಹಿನ್ನೀರಿನ ಕಾಂಡ್ಲಾವನದಲ್ಲಿ ಅಪರೂಪದ ಉಭಯವಾಸಿ ಪ್ರಾಣಿ ಪ್ರಬೇಧವಾದ ನೀರುನಾಯಿಗಳು ಪತ್ತೆಯಾಗಿವೆ.

ಜಲ ಮದ್ದು ಸ್ಫೋಟ ಹಾಗೂ ಅಕ್ರಮ ಬೇಟೆಯಿಂದಾಗಿ ಕರಾವಳಿ ಭಾಗದಲ್ಲಿ ನೀರು ನಾಯಿಗಳ ಸಂತತಿ ಬಹಳ ಕ್ಷೀಣವಾಗಿತ್ತು. ಇದೀಗ ಮತ್ತೆ ಕಾಂಡ್ಲಾವನದಲ್ಲಿ ನೀರು ನಾಯಿಗಳು ಪ್ರತ್ಯಕ್ಷವಾಗಿರುವುದು ಪ್ರಾಣಿಪ್ರಿಯರ ಕುತೂಹಲಕ್ಕೆ ಕಾರಣವಾಗಿದೆ.

ಪರಿಸರ ಪ್ರೇಮಿ ಕುಂದಾಪುರದ ಮಥಾಯಿಸ್ ಡೆಸಾ ಅವರು ಮೂಡ್ಲಕಟ್ಟೆ ಹಿನ್ನೀರಿನ ಪರಿಸರದಲ್ಲಿ ಮೀನುಗಾರಿಕೆ ಮಾಡುವಾಗ ನೀರು ನಾಯಿಗಳು ಕಣ್ಣಿಗೆ ಬಿದ್ದಿವೆ. ತೀರಾ ಹಿಂಜರಿಕೆ ಸ್ವಭಾವದ ನೀರು ನಾಯಿಗಳು ಮನುಷ್ಯರನ್ನು ಕಂಡರೆ, ಮೀನುಗಾರಿಕಾ ಬೋಟ್‌ಗಳ ಶಬ್ದ ಕೇಳುತ್ತಿದರೆ ನೀರಿನಲ್ಲಿ ಮುಳುಗಿ ಕಾಂಡ್ಲಾವನದೊಳಗೆ ಮರೆಯಾಗುತ್ತವೆ. ಪಶ್ಚಿಮ ಘಟ್ಟದ ನದಿಗಳು ಹಾಗೂ ಸಮುದ್ರದ ಹಿನ್ನೀರಿನಲ್ಲಿ ಹಿಂದೆ ನೀರುನಾಯಿಗಳು ಹೆಚ್ಚಾಗಿದ್ದವು. ಮಾಂಸಕ್ಕಾಗಿ ಬೇಟೆ ಹಾಗೂ ಕಳ್ಳಸಾಗಣೆ ಹೆಚ್ಚಾಗಿದ್ದರಿಂದ ಕರಾವಳಿಯಲ್ಲಿ ನೀರುನಾಯಿಗಳ ಸಂತತಿ ವಿನಾಶದ ಅಂಚಿಗೆ ತಲುಪಿವೆ.

Edited By : Nagaraj Tulugeri
Kshetra Samachara

Kshetra Samachara

02/01/2021 01:09 pm

Cinque Terre

11.87 K

Cinque Terre

3

ಸಂಬಂಧಿತ ಸುದ್ದಿ