ಉಡುಪಿ : ರಾಜ್ಯದಲ್ಲಿ ವರುಣಾರ್ಭಟ ಮುಂದುವರೆದಿದ್ದು ಕರಾವಳಿಗೆ ಕಂಟಕವಾಗಿದೆ. ಕೃಷ್ಣ ನಗರಿ ಉಡುಪಿ ಭಾರೀ ಮಳೆಯಿಂದಾಗಿ ಅಕ್ಷರ ಸಹ ನೀರಲ್ಲಿ ಮುಳುಗಿದೆ.
ನಿನ್ನೆ ರವಿವಾರ ಜಿಲ್ಲೆಯಲ್ಲಿ ಸತತ 31 ಗಂಟೆಗಳ ಕಾಲ ಸುರಿದ ಮಳೆ ಸಾಕಷ್ಟು ಅನಾನುಕೂಲತೆಯನ್ನು ಸೃಷ್ಟಿಸಿದೆ.
ಇನ್ನೂ 2 ದಿನ ಉಡುಪಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ನದಿಪಾತ್ರದ ನಡುಗಡ್ಡೆ ಜನ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.
ಧಾರಾಕಾರ ಮಳೆ ಕುಂದಾಪುರ ತಾಲೂಕಿನ ಕಮಲಶಿಲೆಯಲ್ಲಿರುವ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇಗುಲಕ್ಕೆ ನುಗ್ಗಿದೆ.
ದೇವಸ್ಥಾನದ ಒಳಗೆ ಕುಬ್ಜಾ ನದಿ ನೀರು ಪ್ರವೇಶಿಸಿದೆ. ವರ್ಷಕ್ಕೆ ಒಂದು ಬಾರಿ ಮಳೆ ನೀರು ಪ್ರವೇಶಿಸುತ್ತದೆ ಆದ್ರೆ ಈ ವರ್ಷ ಎರಡನೇ ಬಾರಿಗೆ ದೇಗುಲದೊಳಗೆ ನದಿ ನೀರು ಪ್ರವೇಶಿಸಿದೆ.
ಮನೆಗಳಿಗೂ ಕೂಡ ಜಲ ದಿಗ್ಬಂಧನವಾಗಿದೆ. ತಮ್ಮ ಮನೆಗಳನ್ನು ಬಿಟ್ಟು ಜನ ಸಂತ್ರಸ್ತರ ಕೇಂದ್ರ ಸೇರಿದ್ದಾರೆ.
Kshetra Samachara
21/09/2020 08:00 am