ಮಂಗಳೂರು: ಸುರತ್ಕಲ್ ಸಮೀಪದ ಎನ್ಐಟಿಕೆ ಅಕ್ರಮ ಟೋಲ್ ವಿರುದ್ಧ ಅಕ್ಟೋಬರ್ 18 ರಂದು ಮುತ್ತಿಗೆ ಸಂದರ್ಭ ನಡೆಯುವ ಯಾವುದೇ ಬೆಳವಣಿಗೆಗಳಿಗೆ ನಾವು ಹೋರಾಟಗಾರರಿಗೆ ಬೆಂಗಾವಲಾಗಿ ನಿಲ್ಲುತ್ತೇವೆ, ಉಚಿತ ವಕಾಲತ್ತು ಹಾಕುತ್ತೇವೆ, ಹೋರಾಟದಲ್ಲಿ ಭಾಗಿಗಳಾಗುತ್ತೇವೆ ಎಂದು ಸುಮಾರು ನಲವತ್ತರಷ್ಟು ವಕೀಲರು ಸಭೆ ಸೇರಿ ಘೋಷಣೆ ಮಾಡಿದ್ದಾರೆ.
ಅಖಿಲ ಭಾರತ ವಕೀಲರ ಸಂಘದ ಜಿಲ್ಲಾಧ್ಯಕ್ಷ ಯಶವಂತ ಮರೋಳಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಮಂಗಳೂರಿನ ವಕೀಲರುಗಳಾದ ಬಿ ಇಬ್ರಾಹಿ,ಮಂಗಳೂರು ಬಾರ್ ಎಸೋಷಿಯೇಶನ್ ಮಾಜೀ ಅಧ್ಯಕ್ಷ ಚೆಂಗಪ್ಪ, ಟಿ ಎನ್ ಪೂಜಾರಿ, ದಿನೇಶ್ ಹೆಗ್ಡೆ ಉಳೆಪಾಡಿ, ಪದ್ಮರಾಜ್ ಕುದ್ರೋಳಿ, ಅಜಿತ್ ಕುಮಾರ್, ಅಶೋಕ್ ಕಾರಂದೂರು, ರಾಮಚಂದ್ರ ಬಬ್ಬುಕಟ್ಟೆ, ಜೀಷನ್ ಅಲಿ, ಸುಂದರ್ ಗೌಡ, ಮುಕ್ತಾರ್ ಅಹ್ಮದ್, ಪಿ ಸಿ ಸಾಲ್ಯಾನ್, ಸತೀಶ್ ಬಿ, ಮರೀಝಾ ಪಿಂಟೊ, ಸರ್ಫ್ ರಾಜ್, ಚರಣ್ ಶೆಟ್ಟಿ, ಸುನಂದ ಕೊಂಚಾಡಿ, ಮನೋಜ್ ವಾಂಮಜೂರು ಮತ್ತಿತರರು ಉಪಸ್ಥಿತರಿದ್ದರು.
ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಹೋರಾಟದ ವಿವರಣೆ ನೀಡಿದರು. ದಿನೇಶ್ ಹೆಗ್ಡೆ ಉಳೇಪಾಡಿ ಪ್ರಾಸ್ಥಾವಿಕವಾಗಿ ಮಾತಾಡಿದರು. ನಿತಿನ್ ಕುತ್ತಾರ್ ಸ್ವಾಗತಿಸಿದರು.
Kshetra Samachara
08/10/2022 06:34 pm