ಮಂಗಳೂರು: ಕುವೈಟ್ ಬ್ಯಾಂಕ್‌ನಿಂದ ಸಾಲ ರೂಪದಲ್ಲಿ ಕೇರಳದ 1,425 ಮಂದಿ 700 ಕೋಟಿ ರೂ. ಪಡೆದು ಮರು ಪಾವತಿಸದೆ ವಂಚಿಸಿ ಆ ದೇಶವನ್ನು ತೊರೆದ ಬಗ್ಗೆ ವರದಿಯಾಗಿದೆ. ವಂಚನೆ ನಡೆಸಿದವರ ಪತ್ತೆಗಾಗಿ ಕೇರಳದಲ್ಲಿ ಶೋಧ ಆರಂಭಿಸಲಾಗಿದೆ.
ಗಲ್ಫ್ ಬ್ಯಾಂಕ್ ಕುವೈಟ್ ಶೇರ್ ಹೋಲ್ಡಿಂಗ್ ಕಂಪೆನಿ ಪಬ್ಲಿಕ್ ಎಂಬ ಬ್ಯಾಂಕ್‌ನಿಂದ ಸಾಲ ಪಡೆದು ವಂಚಿಸಲಾಗಿದೆ ಎಂದು ಬ್ಯಾಂಕಿನ ಅಧಿಕಾರಿಗಳು ಕೇರಳಕ್ಕೆ ಬಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ಸಲ್ಲಿಸಿದ್ದಾರೆ.
ದೂರಿನ ತನಿಖೆಯನ್ನು ಕೈಂಬ್ರಾಂಚ್ ವಿಭಾಗಕ್ಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಸ್ತಾಂತರಿಸಿದ್ದಾರೆ. 2019ರಿಂದ 2022ರ ಅವಧಿಯಲ್ಲಿ ಈ ಬ್ಯಾಂಕ್‌ನಿಂದ 50 ಲಕ್ಷ ರೂ. ನಿಂದ 3 ಕೋಟಿ ರೂ. ತನಕ ಸಾಲ ಪಡೆದು ಮರು ಪಾವತಿಸದೆ ವಂಚಿಸಿದ್ದಾಗಿ ತನಿಖೆಯಿಂದ ಪತ್ತೆಹಚ್ಚಲಾಗಿದೆ. ವಂಚನೆ ನಡೆಸಿ ಕೆಲವರು ಕೇರಳಕ್ಕೆ ವಾಪಸಾಗಿದ್ದಾರೆ. ಇನ್ನು ಕೆಲವರು ಯುರೋಪ್, ಅಮೆರಿಕ, ಕೆನಡಾ, ಆಸ್ಟ್ರೇಲಿಯ ಮತ್ತು ನ್ಯೂಜಿಲ್ಯಾಂಡ್ ಗೆ ತೆರಳಿದ್ದಾರೆ.
Kshetra Samachara
11/12/2024 11:42 am