ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು:ಹಲವು ರೈಲುಗಳ ಸಮಯ ಬದಲಾವಣೆ

ಮಂಗಳೂರು: ಹಲವು ರೈಲುಗಳ ಸಮಯ ಬದಲಾವಣೆ ಬಗ್ಗೆ ರೈಲ್ವೇ ಇಲಾಖೆ ಅಧಿಸೂಚನೆ ಹೊರಡಿಸಿದೆ.

ಲೋಕಮಾನ್ಯ ಟರ್ಮಿನಸ್‌ನಿಂದ: ಹೊರಡುವ ರೈಲು ಸಂಖ್ಯೆ-12223 ಲೋಕಮಾನ್ಯತಿಲಕ್ ಟರ್ಮಿನಸ್ ಜಂಕ್ಷನ್ ತುರಂತ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಸಂಚಾರ ರಾತ್ರಿ 8.50ರ ಬದಲು - 8.45ಕ್ಕೆ ಮರು ನಿಗದಿಗೊಳಿಸಲಾಗಿದೆ. ಜ. 4ರಿಂದ ಜಾರಿಯಾಗಲಿದೆ.

ಎರ್ನಾಕುಲಂ ಜಂಕ್ಷನ್‌ನಿಂದ ಹೊರಡುವ ರೈಲು ಸಂಖ್ಯೆ -12224 ಜಂಕ್ಷನ್-ಲೋಕಮಾನ್ಯ ಟರ್ಮಿನಸ್ ತುರಂತ್ ಸೂಪರ್ ಫಾಸ್ಟ್‌ ಎಕ್ಸ್‌ಪ್ರೆಸ್ ರೈಲು ಸಂಜೆ 6.50ರ ಬದಲು 7 ಗಂಟೆಗೆ ಲೋಕಮಾನ್ಯ ತಿಲಕ್ ಟರ್ಮಿನಸ್ ತಲುಪಲಿದೆ. ಜ. 1ರಿಂದ ಜಾರಿಯಾಗಲಿದೆ.

ಲೋಕಮಾನ್ಯ ತಿಲಕ್ ಟರ್ಮಿ ನಸ್‌ನಿಂದ ಹೊರಡುವ ರೈಲು -12619 ಲೋಕಮಾನ್ಯ ತಿಲಕ್ ಟರ್ಮಿನಲ್-ಮಂಗಳೂರು ಸೆಂಟ್ರಲ್ ಮತ್ಸ್ಯಗಂಧ ಸೂಪ‌ರ್ ಫಾಸ್ಟ್ ಎಕ್ಸ್‌ ಪ್ರೆಸ್ ರೈಲು ಸಂಜೆ 3.20ರ ಬದಲು 3.10ಕ್ಕೆ ಲೋಕಮಾನ್ಯ ತಿಲಕ್ ಟರ್ಮಿನಸ್‌ನಿಂದ ಹೊರಡಲಿದೆ. ಜ.1ರಿಂದ ಜಾರಿಯಾಗಲಿದೆ.

ತಿರುನಲ್‌ವೇಲಿಯಿಂದ ಹೊರ ಡುವ ರೈಲು ಸಂಖ್ಯೆ-22630 ತಿರುನಲ್‌ವೇಲಿ-ದಾದರ್ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲು ಸಂಜೆ 3 ಗಂಟೆಯ ಬದಲು 3.10ಕ್ಕೆ ದಾದರ್ - ನಿಲ್ದಾಣ ತಲುಪಲಿದ್ದು, ಜ. 1ರಿಂದ ಜಾರಿಯಾಗಲಿದೆ.

ಮಂಗಳೂರು ಜಂಕ್ಷನ್‌ನಿಂದ ಹೊರಡುವ ರೈಲು ಸಂಖ್ಯೆ 12134 -ಮಂಗಳೂರು ಜಂಕ್ಷನ್ ಸಿಎಸ್ ಎಂಟಿ ಮುಂಬಯಿ ಸೂಪ‌ರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಮುಂಜಾನ 4.35ರ 0 4.45 ಕ್ಕೆ ಸಿ ಎಸ್ ಎಮ್ ಟಿ ಮುಂಬಯಿ ನಿಲ್ದಾಣ ತಲುಪಲಿದೆ ಎಂದು ರೈಲ್ವೇ ಇಲಾಖೆ ಪ್ರಕಟನೆ ತಿಳಿಸಿದೆ.

Edited By : PublicNext Desk
Kshetra Samachara

Kshetra Samachara

11/12/2024 10:57 am

Cinque Terre

672

Cinque Terre

0

ಸಂಬಂಧಿತ ಸುದ್ದಿ