ಮಂಗಳೂರು:ನವರಾತ್ರಿಯ ಸಂದರ್ಭದಲ್ಲಿ ಒಂಬತ್ತು ಮಹಿಳೆಯರಿಗೆ,ಬೇರೆ ಬೇರೆ ಇಲಾಖೆಗಳಾದ ಸಾರಿಗೆ, ಎನ್. ಸಿ. ಸಿ, ವಿಧಿ ವಿಜ್ಞಾನ, ಬಂದೋಬಸ್ತ್, ಜೈಲ್, ಪೊಲೀಸ್ ಠಾಣೆ, ಕೆ. ಎಸ್. ಆರ್. ಟಿ. ಸಿ, ಟ್ರಾಫಿಕ್ ಪೊಲೀಸ್, ಅಗ್ನಿಶಾಮಕ, ದೇವಸ್ಥಾನಗಳಲ್ಲಿ ಕೆಲಸ ಮಾಡುವ ಗೃಹರಕ್ಷಕಿಯರಿಗೆ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಚೇರಿಯಲ್ಲಿ ಗೌರವಿಸಲಾಯಿತು.
ಮಹಿಳೆ ಗೃಹರಕ್ಷಕಿಯಾಗಿ ಕೆಲಸ ಮಾಡುವುದರ ಜೊತೆ ಮನೆ ಕೆಲಸ, ತಾಯಿಯಾಗಿ, ತಂಗಿಯಾಗಿ, ಅಕ್ಕನಾಗಿ, ಹೆಂಡತಿಯಾಗಿ, ನಾದಿನಿಯಾಗಿ ಹೀಗೆ ಹತ್ತು ಹಲವು ಪಾತ್ರಗಳನ್ನು ಏಕಕಾಲದಲ್ಲಿ ನಿಭಾಯಿಸುತ್ತಿದ್ದಾರೆ. ಅವರ ಸೇವೆ ಶ್ಲಾಘನೀಯ ಮತ್ತು ಅನುಕರಣಿಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ.ಮುರಲೀ ಮೋಹನ್ ಚೂಂತಾರು ಹೇಳಿದರು.ಡಾ. ಕಿಶನ್ ರಾವ್ ಬಾಳಿಲ ಮಾತನಾಡಿ ಎಲೆ ಮರೆಯ ಕಾಯಿಯಂತೆ ಕೆಲಸ ಮಾಡುವ ಗೃಹರಕ್ಷಕಿಯರು ಮುನ್ನೆಲೆಗೆ ಬರುವುದೇ ಇಲ್ಲ. ಅವರ ಸೇವೆ ಗುರುತಿಸಿ ಗೌರವಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುವ ಗೃಹರಕ್ಷಕಿಯರಾದ ನಯನ ಮೆ. ನಂ 172, ಶೋಭಾ ಮೆ. ನಂ 167, ಮೋಹಿನಿ ಮೆ. ನಂ 33, ಭಾರತಿ ಮೆ ನಂ 71, ನಂದಿನಿ ಮೆ. ನಂ 832, ಮರಿಯ ಮೋಲಿ ಡಿ 'ಸೋಜಾ ಮೆ. ನಂ 835, ಶುಭ ಮೆ. ನಂ 86, ಮಂಜುಳಾ ಮೆ. ನಂ 61, ವಿಮಲ ಮೆ. ನಂ 99 ರವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಗೃಹರಕ್ಷಕದಳದ ಉಪ ಸಮಾದೇಷ್ಟ ರಮೇಶ್, ಕಚೇರಿಯ ಅಧೀಕ್ಷಕ ರತ್ನಾಕರ, ಪ್ರಥಮ ದರ್ಜೆ ಸಹಾಯಕಿ ಅನಿಯ ಟಿ. ಎಸ್, ದಲಾಯತ್ ಮೀನಾಕ್ಷಿ, ಮಂಗಳೂರು ಘಟಕದ ಗೃಹರಕ್ಷಕ ದಿವಾಕರ್, ಸುಲೋಚನಾ, ಜಯಲಕ್ಷ್ಮಿ ಹಾಗೂ ಸುರತ್ಕಲ್ ಘಟಕರ ಗೃಹರಕ್ಷಕ ಲೀಲಾಧರ ಉಪಸ್ಥಿತರಿದ್ದರು.
Kshetra Samachara
01/10/2022 07:18 am