ಮುಲ್ಕಿ: ನೆರೆ ಪೀಡಿತ ಕಿನ್ನಿಗೋಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಕಿಲೆಂಜೂರು ಮಿತ್ತಬೈಲ್, ಮತ್ತಿತರ ಪ್ರದೇಶಗಳಿಗೆ ಶಾಸಕ ಉಮಾನಾಥ ಕೋಟ್ಯಾನ್ ಮತ್ತು ಜಿಲ್ಲಾಧಿಕಾರಿ ರಾಜೇಂದ್ರ ರವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕೃಷಿ ಹಾನಿಯ ಬಗ್ಗೆ ಪರಿಶೀಲನೆ ನಡೆಸಿದರು.
ಈ ಸಂದರ್ಭ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ತಾಲೂಕಿನಲ್ಲಿ ಪ್ರಕೃತಿ ವಿಕೋಪ ಹಾನಿಗೆ ಪರಿಹಾರ ಕ್ರಮಗಳಿಗೆ ತುರ್ತಾಗಿ 7 ಲಕ್ಷ ರೂ ಬಿಡುಗಡೆ ಮಾಡಲಾಗಿದೆ, ಮಳೆಯಿಂದ ಸಾಕಷ್ಟು ರೈತರು ಸಮಸ್ಯೆಕೊಳಗಾಗಿದ್ದಾರೆ,ಯಾವುದೇ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ನೆರೆಗೆ ಸುಮಾರು ಕಟೀಲು, ಕಿಲೆಂಜೂರು ಮಿತ್ತಬೈಲು ಮತ್ತಿತರ ಪ್ರದೇಶಗಳಲ್ಲಿ ಸುಮಾರು 300ಕ್ಕೂ ಅಧಿಕ ಎಕ್ಕರೆ ಕೃಷಿ ನಾಶವಾಗಿದ್ದು ಮಾತ್ರವಲ್ಲದೆ ಸುಮಾರು ಕಿಲೆಂಜೂರು, ಮಿತ್ತಬೈಲು ಪ್ರದೇಶದಲ್ಲಿ 20ಮನೆಗಳು ಜಲಾವೃತವಾಗಿದ್ದು ಎಲ್ಲಾ ಹಾನಿಗಳಿಗೆ ಪರಿಹಾರ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದರು.
ಈ ಸಂದರ್ಭ ಮುಲ್ಕಿ ತಹಶೀಲ್ದಾರ್ ಗುರುಪ್ರಸಾದ್, ಕಂದಾಯ ನಿರೀಕ್ಷಕ ದಿನೇಶ್, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಾಹೀಷ್ ಚೌಟ ಗ್ರಾಮಕರಣಿಕರಾದ ಸುಜಿತ್ ಮೋಹನ್, ಕೃಷಿ ಅಧಿಕಾರಿ ವೀಣಾ, ಕುಲಕರ್ಣಿ, ಬಶೀರ್,ಜನಾರ್ಧನ ಕಿಲೆಂಜೂರು, ಕೇಶವ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
11/07/2022 05:55 pm