ಮಂಗಳೂರು: ನಗರದ ಹೊರವಲಯದ ಮನಾಪಾ ವಾರ್ಡ್ ನಂಬರ್ 24 ದೇರೆಬೈಲ್ ದಕ್ಷಿಣದ ನೆಕ್ಕಿಲಗುಡ್ಡೆ ಪರಿಸರದ ನಾಗರಿಕರ ಬಹುದಿನಗಳ ಬೇಡಿಕೆಯಾಗಿದ್ದ ತಡೆಗೋಡೆ ನಿರ್ಮಾಣದ ವೇಳೆ ಮಳೆಯ ನೀರಿನ ರಭಸಕ್ಕೆ ಮನೆಯೊಂದು ಕುಸಿಯುವ ಭೀತಿಯಲ್ಲಿದ್ದು
ಶಾಸಕರಾದ ಡಾ.ಭರತ್ ಶೆಟ್ಟಿಯವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನವನ್ನು ಹೇಳಿದರು.
ಯಾವುದೇ ರೀತಿಯ ತೊಂದರೆಯಾದಲ್ಲಿ ಸರಕಾರ ಮತ್ತು ಶಾಸಕನ ನೆಲೆಯಲ್ಲಿ ಹಾಗೂ ವೈಯಕ್ತಿಕವಾಗಿ ನಿಮ್ಮೊಂದಿಗೆ ನಾನಿದ್ದೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಯುವ ಮುಖಂಡರಾದ ಚರಿತ್ ಪೂಜಾರಿ, ಮಹಾಶಕ್ತಿಕೇಂದ್ರ ಕಾರ್ಯದರ್ಶಿ ಪ್ರಜ್ವಲ್ ಶೆಟ್ಟಿ, ಶಕ್ತಿಕೇಂದ್ರ ಪ್ರಮುಖ್ ಸೂರ್ಯನಾರಾಯಣ ತುಂಗಾ, ಪ್ರೀತಮ್, ಎಂ.ಎಸ್ ಪೈ , ಪುನೀತ್ ನಿಖಿಲ ಗುಡ್ಡೆ, ಸ್ಥಳೀಯರು ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.
Kshetra Samachara
21/06/2022 05:19 pm