ಉಡುಪಿ: ಕಾಪು ತಾಲೂಕಿನ ಶಂಕರಪುರದ ವಿಶ್ವಾಸದ ಮನೆ ಅನಾಥಾಶ್ರಮದಲ್ಲಿ ಕಳೆದ ಎಂಟು ವರ್ಷಗಳಿಂದ ಮಹಿಳೆಯೊಬ್ಬರು ಆಶ್ರಯ ಪಡೆದಿದ್ದರು. ಅನಾರೋಗ್ಯದ ಕಾರಣದಿಂದ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು. ಶವದ ಮರಣೋತ್ತರ ಪರೀಕ್ಷೆ ನಡೆದಾಗ ಸಂಜೆಯಾಗಿತ್ತು. ಕತ್ತಲಾಗಿರುವುದರಿಂದ ಕಳೇಬರದ ಅಂತ್ಯ ಸಂಸ್ಕಾರ ನಡೆಸಲು, ಆಶ್ರಮ ಮೇಲ್ವಿಚಾರಕರಿಗೆ ಅಸಹಾಯಕತೆ ಎದುರಾಯಿತು.
ಹಾಗಾಗಿ ಶವವನ್ನು ಮರುದಿನ ಅಂತ್ಯಸಂಸ್ಕಾರ ನಡೆಸಲು ರಕ್ಷಿಸಿಡಬೇಕಾದ ಪರಿಸ್ಥಿತಿ ಎದುರಾಯಿತು. ಈ ಸಂದರ್ಭದಲ್ಲಿ ಸಮಾಜಸೇವಕ ನಿತ್ಯಾನಂದ ಒಳಕಾಡು ನೆರವಿಗೆ ಬಂದು ತಮ್ಮ ಮನೆಯಲ್ಲಿರುವ ಸಂಚಾರಿ ವಿದ್ಯುತ್ ಚಾಲಿತ ಶೀತಲೀಕೃತ ಶವ ರಕ್ಷಣಾ ಪೆಟ್ಟಿಗೆಯಲ್ಲಿ ರಕ್ಷಿಸಿಟ್ಟರು. ರಾತ್ರಿಯಿಡೀ ಶವಕ್ಕೆ ಕಾವಲಾಗಿ ನಿಂತರು. ಬಳಿಕ ಅಂತ್ಯಸಂಸ್ಕಾರ ನಡೆಸಲು ಸಂಬಂಧಪಟ್ಟವರಿಗೆ ಶವ ಹಸ್ತಾಂತರಿಸಿದರು. ನಿತ್ಯಾನಂದ ಅವರ ಈ ಮಾನವೀಯ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.
Kshetra Samachara
12/12/2024 03:13 pm