ಕದ್ರಿ : ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಪಾಲಿಕೆ ವ್ಯಾಪ್ತಿಯಲ್ಲಿ ಕದ್ರಿ ಬಿ.22ನೇ ವಾರ್ಡಿನ ಶ್ರೀ ರಾಮ ಭಜನಾ ಮಂದಿರದ ಬಳಿ ತಡೆ ಗೋಡೆ ರಚನೆಗೆ ಸಂಸದರ ಮಳೆ ಹಾನಿ ಪರಿಹಾರ ನಿಧಿಯಿಂದ ರೂ.10ಲಕ್ಷ ಅನುದಾನದಲ್ಲಿ ಶಾಸಕರಾದ ಡಾ. ವೈ ಭರತ್ ಶೆಟ್ಟಿಯವರು ಗುದ್ದಲಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಜಯಾನಂದ ಅಂಚನ್, ರಾಮ ಮಂದಿರದ ಅಧ್ಯಕ್ಷರಾದ ಕಮಲಾಕ್ಷ ಬಂಗೇರ, ಗುತ್ತಿಗೆದಾರ ರಾದ ನಾರಾಯಣ್, ಹಿರಿಯರಾದ ಜಯರಾಮ್, ರಘುರಾಮ್, ಜಿತೇಂದ್ರ, ಬೂತ್ ಅಧ್ಯಕ್ಷರಾದ ಉಮೇಶ್ ಶೆಟ್ಟಿ, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂಜೀತ್ ಶೆಟ್ಟಿ, ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಶೆಟ್ಟಿ ಸ್ಥಳೀಯರಾದ ಹರಿಪ್ರಸಾದ್, ವಿವೇಕ್, ಉಮೇಶ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
Kshetra Samachara
09/08/2021 03:26 pm