ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: ಸಂಸದ ಕಟೀಲ್‌ರನ್ನು ತರಾಟೆಗೆ ತೆಗೆದುಕೊಂಡ ಕಾರ್ಯಕರ್ತರು; ಸೈಲೆಂಟ್ ಆದ ನಾಯಕರು

ಹತ್ಯೆಯಾದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರ ಮೃತ ದೇಹದ ಅಂತಿಮ ಯಾತ್ರೆಯ ಮೆರವಣಿಗೆ ‍1 ಗಂಟೆ ಸುಮಾರಿಗೆ ಬೆಳ್ಳಾರೆ ತಲುಪಿದೆ. ಈ ವೇಳೆ ಅಂತಿಮ ದರ್ಶನ ಪಡೆಯಲು ಬಂದ ಬಿಜೆಪಿ ನಾಯಕರಿಗೆ ಹಾಗೂ ಆರ್‌ಎಸ್‌ಎಸ್ ಮುಖಂಡರಿಗೆ ಘೇರಾವ್ ಹಾಕಿ, ದಿಕ್ಕಾರ ಕೂಗಿದ ಪಕ್ಷದ ಕಾರ್ಯಕರ್ತರು ಆಕ್ರೋಶ ವ್ಯಕ್ತ ಪಡಿಸಿದ ಘಟನೆ ನಡೆದಿದೆ. ಈ ವೇಳೆ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ನಡೆಸಲಾಗಿದೆ. ಘಟನೆಯಲ್ಲಿ ಪೊಲೀಸರು ಹಾಗೂ ಕಾರ್ಯಕರ್ತರು ಗಾಯಗೊಂಡಿದ್ದಾರೆ

ನ್ಯಾಯಕ್ಕಾಗಿ ಆಗ್ರಹಿಸಿದ ಕಾರ್ಯಕರ್ತರು ಸಂಸದ ನಳೀನ್ ಕುಮಾರ್ ಕಟೀಲ್, ಸಚಿವರಾದ ಸುನೀಲ್ ಕುಮಾರ್, ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹಾಗೂ ಕರವಾಳಿ ಭಾಗದ ಬಿಜೆಪಿ ಶಾಸಕರು ಕಾರ್ಯಕರ್ತರ ಆಕ್ರೋಶದ ಬಿಸಿ ಅನುಭವಿಸಿದರು.

ಬಾಯಿ ತೆರೆಯಲು ಅವಕಾಶ ನೀಡದೆ ಹಿಗ್ಗಾಮುಗ್ಗಾ ಜಾಡಿಸಿದ ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಸಾಧ್ಯವಾಗದೇ ಈ ನಾಯಕರು ಮೌನವಾಗಿದ್ದರು. ಕೊನೆಗೆ ಕಾರ್ಯಕರ್ತರ ಬೈಗುಳಗಳ ತೀವ್ರತೆಯನ್ನು ತಾಳಲಾಗದೇ ಅಲ್ಲಿಂದ ಜಾಗ ಖಾಲಿ ಮಾಡಲು ಪ್ರಯತ್ನಿಸಿದಾಗ ಕಾರ್ಯಕರ್ತರು ಇನ್ನಷ್ಟು ಆಕ್ರೋಶಗೊಂಡರು.

ನಳಿನ್, ಸಚಿವ ಸುನೀಲ್ ಕುಮಾರ್ ಹಾಗೂ ಪ್ರಭಾಕರ ಭಟ್ ಕಾರಿನಲ್ಲಿ ಕೂತಾಗ ಆ ಕಾರನ್ನು ಘೇರಾವ್ ಹಾಕಿದ ಕಾರ್ಯಕರ್ತರು ಅದರ ಮೇಲೆ ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಹೆಲ್ಮೆಟ್‌ನಿಂದಲೂ ದಾಳಿ ಮಾಡಿದ್ದಾರೆ ಎಂದು ವರದಿಯಾಗಿದೆ. ನ್ಯಾಯ ಬೇಕೆ ಬೇಕು ಎಂದು ಕಿಕ್ಕಿರಿದು ಸೇರಿದ ಕಾರ್ಯಕರ್ತರು ಘೋಷಣೆ ಕೂಗಿದ್ದು ಅವರ ಆಕ್ರೋಶ ಮುಗಿಲು ಮುಟ್ಟಿದೆ. ಬೆಳ್ಳಾರೆಯಲ್ಲಿ ಮೃತದೇಹದ ಅಂತಿಮ‌ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಮಾಡಲಾಗಿತ್ತು. ಇದೀಗ ಮೃತದೇಹವನ್ನು ನೆಟ್ಟಾರಿಗೆ ಕೊಂಡೊಯ್ಯಲಾಗಿದೆ.

Edited By :
PublicNext

PublicNext

27/07/2022 03:45 pm

Cinque Terre

41.15 K

Cinque Terre

2

ಸಂಬಂಧಿತ ಸುದ್ದಿ