ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಸುಮೊಟೋ ಕೇಸ್ - ಹಿಂದೂ ಮುಖಂಡ ಶ್ರೀಕಾಂತ್ ಶೆಟ್ಟಿ ,ರಮೇಶ್ ತೆಳ್ಳಾರುಗೆ ಜಾಮೀನು ಮಂಜೂರು

ಉಡುಪಿ : ಧರ್ಮ ದಂಗಲ್ ಕಾರಣಕ್ಕೆ ನಗರದಲ್ಲಿ ಸದ್ದು ಮಾಡಿದ್ದ ಪ್ರಕರಣ ಸಂಬಂಧ ಹಿಂದೂ ಮುಖಂಡರಿಗೆ ಜಾಮೀನು ಮಂಜೂರಾಗಿದೆ. ಕಾರ್ಕಳದ ಶ್ರೀ ವೆಂಕಟರಮಣ ದೇವಸ್ಥಾನದ ಲಕ್ಷ ದೀಪೋತ್ಸವ ಸಂದರ್ಭ ಹಿಂದೂ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಮೊದಲು ಪ್ರಾಶಸ್ಯ ನೀಡಬೇಕು ಎಂದು ಹೇಳಿದ ಕಾರಣಕ್ಕೆ ಪೊಲೀಸರಿಂದ ಸುಮೋಟೋ ಕೇಸ್ ದಾಖಲಾಗಿತ್ತು. ಹಿಂದೂ ಜಾಗರಣ ವೇದಿಕೆಯ ರಮೇಶ್ ತೆಳ್ಳಾರು ಹಾಗೂ ಹಿಂದೂ ಮುಖಂಡ ಶ್ರೀಕಾಂತ ಶೆಟ್ಟಿ ಮೇಲೆ ಕೇಸು ದಾಖಲಾಗಿತ್ತು. ಸುಮೋಟೋ ಕೇಸ್ ಖಂಡಿಸಿ ಪ್ರತಿಭಟನೆಗೆ ಕರೆ ನೀಡಿದ್ದರು ಎಂಬ ಕಾರಣಕ್ಕೆ ಹಿಂದೂ ಜಾಗರಣ ವೇದಿಕೆಯ ಪ್ರಾಂತಸ್ತರದ ಮುಖಂಡ ಶ್ರೀಕಾಂತ್ ಶೆಟ್ಟಿ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದರು.ಇದೀಗ 26 ದಿನಗಳ ಅನಂತರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ. ರಮೇಶ್ ಪರವಾಗಿ ಮಣಿರಾಜ್ ಶೆಟ್ಟಿ ಮತ್ತು ಶ್ರೀಕಾಂತ್ ಶೆಟ್ಟಿ ಪರವಾಗಿ ಮಟ್ಟಾರು ರತ್ನಾಕರ ಹೆಗ್ಡೆ ವಾದಿಸಿದ್ದರು. ಹಿಂದೂ ನಾಯಕರನ್ನು ಟಾರ್ಗೆಟ್ ಮಾಡಿ ಸುಮೋಟೊ ಕೇಸು ದಾಖಲಿಸಲಾಗುತ್ತಿದೆ ಎಂದು ಉಡುಪಿ ಜಿಲ್ಲೆಯ ಐದು ಕ್ಷೇತ್ರಗಳ ಬಿಜೆಪಿ ಶಾಸಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿತ್ತು.

Edited By : PublicNext Desk
Kshetra Samachara

Kshetra Samachara

12/12/2024 02:47 pm

Cinque Terre

492

Cinque Terre

0

ಸಂಬಂಧಿತ ಸುದ್ದಿ