ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು : ಮೀನಿನ ವಾಹನದಲ್ಲಿದ್ದ 4.25 ಲಕ್ಷ ರೂ. ಕಳವು !

ಕಾಪು : ಮೀನು ಸಾಗಾಟದ ವಾಹನದಲ್ಲಿದ್ದ ನಗದನ್ನು ವಾಹನದಲ್ಲಿದ್ದವರೇ ಕಳವು ಮಾಡಿರುವ ಘಟನೆ ಕಟಪಾಡಿಯಲ್ಲಿ ನಡೆದಿದೆ.

ಇನ್ಸುಲೇಟರ್ ಮೀನು ವಾಹನದಲ್ಲಿ ಅಬ್ದುಲ್‌ ಸತ್ತಾರ್ ಚಾಲಕನಾಗಿದ್ದು, ಮಹಮ್ಮದ್‌ ಅದ್ನಾನ್ ಮತ್ತು ನಿಶಾದ್ ಜತೆಗಿದ್ದರು. ಚಾಲಕ ಕಟಪಾಡಿಯಲ್ಲಿ ವಾಹನ ನಿಲ್ಲಿಸಿ ನಿದ್ದೆಗೆ ಜಾರಿದ್ದರು.

ಬೆಳಗ್ಗೆ ಎಚ್ಚರವಾದಾಗ ವಾಹನದಲ್ಲಿದ್ದ ಕಂಡಕ್ಟರ್ ಮಹಮ್ಮದ್‌ ಅದ್ನಾನ್ ಮತ್ತು ನಿಶಾದ್ ಇಲ್ಲದೇ ಇದ್ದು, ವಾಹನದಲ್ಲಿಟ್ಟಿದ್ದ 4.25 ಲಕ್ಷ ರೂಪಾಯಿ ನಗದು ಕಳವಾಗಿರುವುದು ಗೊತ್ತಾಗಿದೆ. ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : PublicNext Desk
PublicNext

PublicNext

12/12/2024 10:56 am

Cinque Terre

3.28 K

Cinque Terre

0

ಸಂಬಂಧಿತ ಸುದ್ದಿ