ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಧುನಿಕ ಭಗೀರಥನಾದ ದೇಶಪಾಂಡೆ ಫೌಂಡೇಶನ್ : ಉಳುವಪ್ಪನ ಉಳುಮೆಗೆ ಉಸಿರಾದ ಕೃಷಿಹೊಂಡ

'' ಒಕ್ಕಲಿಗ ಒಕ್ಕದಿರೆ ಬಿಕ್ಕುವುದು ಜಗವೆಲ್ಲ '' ಹೌದು ಆದರೆ ಮಳೆಯ ಕಣ್ಣು ಮುಚ್ಚಾಲೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಿಂತಾಗಿ ಅನ್ನದಾತನೆ ಬಿಕ್ಕುವಂತಾಗಿದೆ. ಆದರೆ ಬಿರಿದು ನಿಂತಿರುವ ನವಲಗುಂದ ತಾಲೂಕಿನ ಹೊಲಗಳಿಗೆ ನೀರುಣಿಸುವ ಮೂಲಕ ಆಧುನಿಕ ಭಗೀರಥನಾಗಿ ಬಂದಿದೆ ದೇಶಪಾಂಡೆ ಫೌಂಡೇಶನ್.

ಫೌಂಡೇಶನ್ ನೆರವಿನಿಂದ ತನ್ನ ಬದುಕನ್ನು ಹಸನು ಮಾಡಿಕೊಂಡಿರುವ ರೈತ, ಬೆಳವಟಗಿ ಗ್ರಾಮದ ಉಳವಪ್ಪ ಹೂಗಾರ ಅವರ ಯಶೋಗಾಥೆ ಇಲ್ಲಿದೆ. ತನ್ನ ಮಳೆಯಾಸರೆಯೊಂದಿಗೆ ಕೇವಲ 4 ಎಕರೆ 10 ಗುಂಠೆ ಜಮೀನಿನಲ್ಲಿ ಒಣ ಬೇಸಾಯ ಮಾಡಿಕೊಂಡಿದ್ದ ಇವರು ಇಂದು ವರ್ಷವಿಡಿ ಜೋಳ,ಗೋದಿ, ಕಡಲೆ, ಹೆಸರು ಸೇರಿದಂತೆ ಈಗ ಹತ್ತಿಯನ್ನು ಬೆಳೆದು ದ್ವಿಗುಣ ಲಾಭ ಮಾಡಿಕೊಂಡಿದ್ದಾರೆ. ಅಂದು ಬರಡು ಭೂಮಿ ಇಂದು, 120 X 120 ಉದ್ದಗಲ ಹಾಗೂ 12 ಅಡಿ ಆಳದ ಕೃಷಿ ಹೊಂಡದಿಂದ ನಂದನವವಾಗಿದೆ. ಕುರಿಗಾರರಿಗೆ, ನೀರಡಿಸಿ ಬಂದವರಿಗೆ ಆಸರೆಯೂ ಆಗಿ ನಿಂತಿದೆ.

ಉಳವಪ್ಪ ಅವರ ಹೊಲದಲ್ಲ ಒಮ್ಮೆ ಸುತ್ತಾಡಿ ಅವರಿಂದಲೇ ದೇಶಪಾಂಡೆ ಫೌಂಡೇಶನ್ ನೀಡಿದ ಸಹಕಾರ, ಬೆಳೆದ ಸಮೃದ್ಧ ಬೆಳೆ ಹಾಗೂ ಮಾಡಿದ ಲಾಭ ಅವರಿಂದಲೇ ಕೇಳೋಣ ಬನ್ನಿ.

Edited By : Nagesh Gaonkar
Kshetra Samachara

Kshetra Samachara

29/01/2021 09:15 pm

Cinque Terre

134.25 K

Cinque Terre

12

ಸಂಬಂಧಿತ ಸುದ್ದಿ