ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ತೆಂಗು ರೈತ ಉತ್ಪಾದಕರ ಸಂಸ್ಥೆ ರಾಜ್ಯ ಮಟ್ಟಕ್ಕೆ ವಿಸ್ತರಣೆ- ಪ್ರತಿ ತಾಲೂಕಿನಲ್ಲಿ ವಿತರಣೆ ಕೇಂದ್ರ

ಮಂಗಳೂರು: ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಯು ತನ್ನ ವ್ಯವಹಾರವನ್ನು ರಾಜ್ಯ ಮಟ್ಟಕ್ಕೆ ವಿಸ್ತರಿಸಲು

ಯೋಜನೆ ರೂಪಿಸಿದ್ದು, ರಾಜ್ಯದ ಪ್ರತಿ ತಾಲೂಕಿನಲ್ಲಿ ವಿತರಣಾ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಿದೆ.

ಮಂಗಳೂರಿನ‌ ಪ್ರೆಸ್ ಕ್ಲಬ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ಅಧ್ಯಕ್ಷ ಕುಸುಮಾಧರ ಎಸ್.ಕೆ., ಸಂಸ್ಥೆಯು ಈಗಾಗಲೇ ಹಲವು ಉತ್ಪನ್ನಗಳನ್ನು ಅಭಿವೃದ್ಧಿ ಪಡಿಸಿ, ತನ್ನ ಉತ್ಪಾದನಾ ಘಟಕವನ್ನು ವಿಸ್ತರಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಸಂಸ್ಥೆಯ ಉತ್ಪನ್ನಗಳ ಮಾರುಕಟ್ಟೆ ವಿಸ್ತರಿಸುವ ಉದ್ದೇಶದಿಂದ 247 ಫ್ರ್ಯಾಂಚೈಸಿ ತೆರೆಯಲು ಅವಕಾಶವನ್ನು ಸಂಸ್ಥೆಯು ಕಲ್ಪಿಸುತ್ತಿದೆ.

ಈ ಮೂಲಕ ಆಸಕ್ತರಿಗೆ ಸ್ವ ಉದ್ಯಮ ಘಟಕ ಆರಂಭಿಸಲು ಅವಕಾಶ ನೀಡುತ್ತಿದೆ.ರೈತರಿಂದಲೇ ಸ್ಥಾಪಿತವಾದ ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಯು, ತೆಂಗು ಬೆಳೆ ಮತ್ತು ಅದರ ಎಲ್ಲಾ ಭಾಗಗಳನ್ನು ಮೌಲ್ಯವರ್ಧಿಸಿ, ಮಾರುಕಟ್ಟೆಯಲ್ಲಿ ಬೇಡಿಕೆಯಿರುವ ಉತ್ಪನ್ನಗಳನ್ನಾಗಿ ಪರಿವರ್ತಿಸಿ, ರೈತರಿಂದ ಗ್ರಾಹಕರಿಗೆ ತಲುಪಿಸುವ ಪ್ರಕ್ರಿಯೆಯನ್ನು ವೈಜ್ಞಾನಿಕವಾಗಿ ವ್ಯವಸ್ಥಿತವಾಗಿ ನಿರ್ವಹಿಸುತ್ತಿದೆ.

ಕೃಷಿಯೇ ದೇಶದ ಬೆನ್ನೆಲುಬು. ಕೃಷಿ ಉತ್ಪನ್ನಗಳು ಹಲವು ಕೈಗಾರಿಕೆಗಳಿಗೆ ಕಚ್ಚಾ ವಸ್ತುಗಳನ್ನು ಪೂರೈಸುತ್ತಿದೆ.

ಕೃಷಿಯಿಂದಲೇ ಬದುಕು ಕಂಡುಕೊಂಡ ರೈತರು, ಕೃಷಿಯಿಂದ ವಿಮುಖರಾಗುವುದು ದೇಶದ ಅಭಿವೃದ್ಧಿಗೆ

ಮಾರಕ. ಕೃಷಿ ಕ್ಷೇತ್ರಕ್ಕೆ ಮತ್ತೆ ಉತ್ತೇಜನ ನೀಡುವ ಅವಶ್ಯಕತೆ ಬಂದಿದೆ. ಕೃಷಿಯಿಂದಲೇ ಭವಿಷ್ಯವಿದೆ ಎಂಬ

ಸತ್ಯವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು.

ಈ ಹಿನ್ನೆಲೆಯಲ್ಲಿ ಕೃಷಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸಂಸ್ಥೆಯು ತೆಂಗಿನ ನಾನಾ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿ, ಮಾರುಕಟ್ಟೆ ಕಲ್ಪಿಸುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕುಮಾರ್ ಪೆರ್ನಾಜೆ, ಗಿರಿಧರ್ ಸ್ಕಂದ, ಚೇತನ್ ಎ.,ಯತೀಶ ಕೆ.ಯಸ್. ಉಪಸ್ಥಿತರಿದ್ದರು.

Edited By : Shivu K
PublicNext

PublicNext

09/12/2024 10:15 pm

Cinque Terre

26.99 K

Cinque Terre

0