ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಶಿವಮೊಗ್ಗಕ್ಕೆ ಉತ್ತಮ ಶ್ರೇಯಾಂಕ-ಮೇಯರ್ ಹರ್ಷ

ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಗೆ ಸ್ವಚ್ಛ ಸರ್ವೇಕ್ಷಣ್-2022ರ ಉತ್ತಮ ಶ್ರೇಯಾಂಕ ಪಡೆದಿರುವುದು ನಮ್ಮ ಜವಾಬ್ದಾರಿ ಹೆಚ್ಚಿಸಿದೆ ಎಂದು ಮೇಯರ್ ಸುನಿತಾ ಅಣ್ಣಪ್ಪ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಉತ್ತಮ ಶ್ರೇಯಾಂಕ ಪಡೆಯಲು ಪಾಲಿಕೆ ಸ್ವಚ್ಛತೆ ವಿಭಾಗದಲ್ಲಿ ಹಲವು ತಂತ್ರಜ್ಞಾನಗಳನ್ನು ಬಳಸಿಕೊಳ್ಳಬೇಕಾಗುತ್ತದೆ. ಇಡೀ ದೇಶದಲ್ಲಿಯೇ ಕೆಲವೇ ಕೆಲವು ಮಹಾನಗರ ಪಾಲಿಕೆಗಳಿಗೆ ಈ ಗೌರವ ಲಭಿಸಿದೆ. ಅದರಲ್ಲಿ ಶಿವಮೊಗ್ಗವೂ ಒಂದು ಎಂಬುದು ನಮ್ಮ ಹೆಮ್ಮೆ ಎಂದಿದ್ದಾರೆ. ನಮಗೆ ಕಸ ವಿಲೇವಾರಿಗೆ ಹೆಚ್ಚು ಅಂಕಗಳು ಸಿಕ್ಕಿಲ್ಲ. ಕಸ ಕೂಡ ನಗರದಲ್ಲಿ ಉಳಿಯುತ್ತಿದೆ. ವಿಲೇವಾರಿಯಾಗುತ್ತಿಲ್ಲ ಎಂಬ ಕೊರಗು ಕೂಡ ನಮಗಿದೆ. ಆದರೆ, ಪ್ರತಿನಿತ್ಯ ಸಂಗ್ರಹವಾಗುವ ಘನ ತ್ಯಾಜ್ಯವನ್ನು ನವೀನ ತಂತ್ರಜ್ಞಾನಗಳ ಮೂಲಕ ಸಮರ್ಪಕವಾಗಿ ವಿಲೇವಾರಿ ಮಾಡುವುದರಲ್ಲಿ ನಾವು ಮೊದಲ ಸ್ಥಾನದಲ್ಲಿದ್ದೇವೆ. ಗಾಡಿಕೊಪ್ಪದಲ್ಲಿ ಬಯೋಮೆಥನೇಷನ್ ಘಟಕ ಸ್ಥಾಪಿಸಲಾಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಶೂನ್ಯ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಿ ತ್ಯಾಜ್ಯವನ್ನು ಹಸಿ, ಒಣ ಎಂದು ವಿಂಗಡಿಸಿ ಗೊಬ್ಬರ ತಯಾರಿಸಲು ಕೂಡ ಯೋಜನೆ ರೂಪಿಸಲಾಗಿದೆ. ಒಟ್ಟಾರೆ ಕಸವನ್ನು ವೈಜ್ಞಾನಿಕವಾಗಿ ಸಂಸ್ಕರಿಸಲಾಗುತ್ತದೆ ಎಂದಿದ್ದಾರೆ. ಪ್ರತಿ ಮನೆಗೆ ಡಸ್ಟ್ ಬಿನ್ ವಿತರಣೆ ಮಾಡಿದ್ದೇವೆ. ಕಸ ವಿಲೇವಾರಿ ಮಾಡುವ ವಾಹನಗಳನ್ನು ಖರೀದಿಸಿದ್ದೇವೆ. ಬಹುಮುಖ್ಯವಾಗಿ ನಮಗೆ ಹೆಚ್ಚು ಅಂಕ ಸಿಕ್ಕಿರುವುದು ಬಯಲು ಶೌಚಮುಕ್ತವನ್ನಾಗಿ ಮಾಡಿರುವುದು. ಅದರ ಜೊತೆಗೆ ದ್ರವ ತ್ಯಾಜ್ಯ ನಿರ್ವಹಣೆ ನಮ್ಮ ಹೆಮ್ಮೆಯಾಗಿದೆ. ಹೀಗೆ ಎಲ್ಲಾ ವಿಭಾಗಗಳಲ್ಲಿಯೂ ನಾವು ಹೆಚ್ಚು ಅಂಕ ಪಡೆದು ಉತ್ತಮ ಶ್ರೇಯಾಂಕ ಪಡೆದಿದ್ದೇವೆ ಎಂದಿದ್ದಾರೆ.

ಜನರ ಸಹಕಾರದಿಂದ ಮಾತ್ರ ಉತ್ತಮ ಕೆಲಸ ಮಾಡಲು ಸಾಧ್ಯ. ಮಹಾನಗರ ಪಾಲಿಕೆ ಸಿಬ್ಬಂದಿ ಕಸ ತೆಗೆದುಕೊಂಡು ಹೋದ ಮೇಲೂ ಸಾರ್ವಜನಿಕರು ಎಲ್ಲಿ ಬೇಕೆಂದರಲ್ಲಿ ಕಸ ಹಾಕುತ್ತಾರೆ. ಇದು ನಿಲ್ಲಬೇಕು. ಪ್ರತಿದಿನ ಶೇ. 10 ರಷ್ಟು ಕಸ ವಿಲೇವಾರಿಯಾಗದೇ ಉಳಿಯುತ್ತಿದೆ. ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಕಸ ಉಳಿಯದಂತೆ ಮತ್ತು ಕಸದಿಂದ ಗೊಬ್ಬರ ತಯಾರಿಸುವ ಘಟಕ ಸ್ಥಾಪಿಸಿ ಮತ್ತಷ್ಟು ಉತ್ತಮ ವಾತಾವರಣ ನಿರ್ಮಿಸಲಾಗುವುದು. ವಿನೂತನ ತಂತ್ರಜ್ಞಾನ ಅಳವಡಿಸಲಾಗುವುದು. ಹಸಿರು ಇಂಧನವನ್ನು ಪಾಲಿಕೆಯ ವಾಹನಗಳಲ್ಲಿ ಬಳಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

Edited By : Shivu K
PublicNext

PublicNext

11/10/2022 07:44 am

Cinque Terre

37.91 K

Cinque Terre

0

ಸಂಬಂಧಿತ ಸುದ್ದಿ