ಶಿವಮೊಗ್ಗ : ಕಾರ್ಯಕ್ರಮಕ್ಕಾಗಿ ಹೆಸರು ಆಗಬೇಕಿದ್ದ ಶಿವಮೊಗ್ಗದ ಕುವೆಂಪು ರಂಗಮಂದಿರ ಇಂದು ಅಕ್ಷರಶಃ ಗಲಾಟೆ-ಗೊಂದಲಕ್ಕೆ ಕಾರಣವಾಯ್ತು. ಆಶ್ರಯ ಸಮಿತಿ ಅಧ್ಯಕ್ಷ ಹಾಗೂ ಶಾಸಕರ ಗಮನಕ್ಕೂ ಬಾರದೆ ಹಕ್ಕುಪತ್ರ ವಿತರಣಾ ಕಾರ್ಯಕ್ರಮವನ್ನು ದಿಢೀರನೆ ಮುಂದೂಡಿರುವುದು ಇದಕ್ಕೆಲ್ಲಾ ಕಾರಣವಾಗಿದೆ.
ಅಂದಹಾಗೆ ಇಂದು ಪಾಲಿಕೆವತಿಯಿಂದ ಆಶ್ರಯ ಮನೆಯ ಹಕ್ಕುವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದರೆ ಕಾರ್ಯಕ್ರಮವನ್ನು ದಿಢೀರನೆ ಮುಂದೂಡಿದ್ದನ್ನು ವಿರೋಧಿಸಿ ಫಲಾನುಭವಿಗಳು ಪ್ರತಿಭಟನೆ ನಡೆಸಿದರು.
ಪಾಲಿಕೆಯ ಆಯುಕ್ತರು ಹಾಗೂ ಸಚಿವರ ವಿರುದ್ಧ ಫಲಾನುಭವಿಗಳು ಘೋಷಣೆ ಕೂಗಿದರು. ನಮಗೆ ಹಕ್ಕುಪತ್ರ ಕೊಡುವ ತನಕ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಪಾಲಿಕೆ ಆಯುಕ್ತರಿಗೆ ದಿಬ್ಬಂಧನ ಹಾಕಿ ಕುವೆಂಪು ರಂಗಮಂದಿರದ ಹೊರಗೇಟ್‍ನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಕಳೆದ ಹಲವು ವರ್ಷಗಳಿಂದ ನಮಗೆ ಮನೆ ಸಿಗುತ್ತದೆ ಎಂದು ನೂರಾರು ಜನರು ಕಾಯುತ್ತ ಕುಳಿತಿದ್ದಾರೆ. ನಿನ್ನೆ ತನಕ ಲಕ್ಷಾಂತರ ರೂ.ಗಳನ್ನು ಕಟ್ಟಿದ್ದಾರೆ. ಮನೆ ಸಿಗುತ್ತದೆ ಎಂದು ಈಗ ಬಂದಿದ್ದಾರೆ. ಮನೆಗಳ ಹಸ್ತಾಂತರ ಮಾಡುತ್ತೇವೆ ಎಂದು ಹೇಳಿ ಈಗ ಅದನ್ನು ಮುಂದೂಡಿರುವುದು ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದರು.
ಮೂಲಭೂತ ಸೌಲಭ್ಯಗಳು ಇಲ್ಲ ಎಂಬ ಕಾರಣವನ್ನು ಆಯುಕ್ತರು ಹೇಳುತ್ತಿದ್ದಾರೆ. ಇದು ಅವರಿಗೆ ಗೊತ್ತಿಲ್ಲರಲಿಲ್ಲವೆ. ಏಕೆ ಕಾರ್ಯಕ್ರಮ ಆಯೋಜಿಸಬೇಕಾಗಿತ್ತು. ವಿತರಣಾ ಕಾರ್ಯಕ್ರಮವನ್ನು ಮುಂದೂಡಬೇಕಾದವರು ಸಚಿವರೇ ಎಂದು ಪ್ರಶ್ನಿಸಿದ ಅವರು, ಇದಕ್ಕೆ ಆಶ್ರಯ ಸಮಿತಿ ಎಂದು ಇರುತ್ತದೆ. ಅದಕ್ಕೆ ಅಧ್ಯಕ್ಷರು ಇರುತ್ತಾರೆ. ಶಾಸಕರು ಇದ್ದಾರೆ. ಶಾಸಕರ ಗಮನಕ್ಕೆ ಬಾರದೆ ಈ ರೀತಿ ಮಾಡಿರುವುದಕ್ಕೆ ಫಲಾನುಭವಿಗಳು ಆಕ್ರೋಶ ಹೊರ ಹಾಕಿದರು.
PublicNext
07/12/2024 04:45 pm