ಪಾಣಿಪತ್ : ದೇಶದಲ್ಲಿ ಕಾಂಗ್ರೆಸ್ ಎಷ್ಟೇ ಬ್ಲ್ಯಾಕ್ ಮ್ಯಾಜಿಕ್ ಮಾಡಿದರು ಜನರ ಮುಂದೆ ಅವರ ಆಟ ನಡೆಯುವುದಿಲ್ಲ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಾಣಿಪತ್ ನಲ್ಲಿ 35 ಎಕರೆ ಪ್ರದೇಶದಲ್ಲಿ 909 ಕೋಟಿ ರೂ ವೆಚ್ಚದಲ್ಲಿ 2ನೇ ತಲೆಮಾರಿನ (2ಜಿ) ಎಥೆನಾಲ್ ಘಟಕವನ್ನ ಉದ್ಘಾಟಿಸಿ ಅವರು ಮಾತನಾಡಿದ ಅವರು ಕೇಂದ್ರ ಸರ್ಕಾರದ ವಿರುದ್ಧ ಕಪ್ಪುಪಟ್ಟಿ ಧರಿಸಿ ಸರ್ಕಾರವನ್ನ ವಿರೋಧಿಸಿದ್ದ ಪ್ರತಿಪಕ್ಷಗಳನ್ನ ತರಾಟೆಗೆ ತೆಗೆದುಕೊಂಡರು.
'ನಮ್ಮ ದೇಶದಲ್ಲೂ ಕೆಲವರು ನಕಾರಾತ್ಮಕತೆಯ ಸುಳಿಯಲ್ಲಿ ಸಿಲುಕಿ ಹತಾಶೆಯಲ್ಲಿ ಮುಳುಗಿದ್ದಾರೆ ಎಂದು ಪ್ರಧಾನಿ ಹೇಳಿದರು. ಸರ್ಕಾರದ ವಿರುದ್ಧ ಸುಳ್ಳು ಹೇಳಿದರೂ ಸಾರ್ವಜನಿಕರು ಅಂಥವರನ್ನ ನಂಬಲು ಸಿದ್ಧರಿಲ್ಲ. ಅಂತಹ ಹತಾಶೆಯಲ್ಲಿ, ಈ ಜನರು ಈಗ ಮಾಟಮಂತ್ರದ ಕಡೆಗೆ ತಿರುಗುತ್ತಿರುವುದು ಕಂಡುಬರುತ್ತದೆ' ಎಂದರು.
'ಆಗಸ್ಟ್ 5 ರಂದು ಬ್ಲ್ಯಾಕ್ ಮ್ಯಾಜಿಕ್ ಹರಡುವ ಪ್ರಯತ್ನವನ್ನ ನಾವು ನೋಡಿದ್ದೇವೆ. ಕಪ್ಪು ಬಟ್ಟೆ ಧರಿಸಿದರೆ ತಮ್ಮ ಹತಾಶೆಯ ಅವಧಿ ಮುಗಿಯುತ್ತದೆ ಎಂದು ಅವರು ಭಾವಿಸುತ್ತಾರೆ, ಆದರೆ ಅವರು ಎಷ್ಟೇ ಅಬ್ಬರಿಸಿದರೂ, ಸಾರ್ವಜನಿಕರ ವಿಶ್ವಾಸವು ತಮ್ಮ ಮೇಲೆ ಎಂದಿಗೂ ಬೆಳೆಯುವುದಿಲ್ಲ ಎಂದು ಅವರಿಗೆ ತಿಳಿದಿಲ್ಲ' ಎಂದು ಕಿಡಿಕಾರಿದರು.
PublicNext
10/08/2022 10:44 pm