ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನನ್ನ ರಾಜಕೀಯ ಜೀವನ ರೂಪಿಸಿದ್ದು, ಕೆಡವಿದ್ದೂ ಗಾಂಧಿಗಳೇ ಮಣಿಶಂಕರ್ ಅಯ್ಯರ್...ವಿಡಿಯೋ ವೈರಲ್

ನವದೆಹಲಿ : ‘ನನ್ನ ರಾಜಕೀಯ ಜೀವನ ರೂಪಿಸಿದ್ದೂ, ಕೆಡವಿದ್ದೂ ಗಾಂಧಿಗಳೇ’ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿದ್ದಾರೆ.

‘2012ರಲ್ಲಿ ಎರಡು ಆಘಾತಗಳು ಉಂಟಾದವು ಮೊದಲನೆಯದು ಸೋನಿಯಾ ಗಾಂಧಿ ಅನಾರೋಗ್ಯಕ್ಕೀಡಾದರು. ಇನ್ನೊಂದು ಡಾ. ಮನಮೋಹನ್ ಸಿಂಗ್‌ 6 ಬೈಪಾಸ್ ಸರ್ಜರಿಗೆ ಒಳಗಾದರು. ಹೀಗಾಗಿ ಸರ್ಕಾರ ಹಾಗೂ ಪಕ್ಷದ ನಾಯಕತ್ವದ ಶಕ್ತಿ ಉಡುಗಿತು’ ಎಂದು ಹೇಳಿದ್ದಾರೆ.

‘ಒಂದು ವೇಳೆ ಪ್ರಣಬ್ ಮುಖರ್ಜಿ ಪ್ರಧಾನಮಂತ್ರಿಯನ್ನಾಗಿಯೂ, ಮನಮೋಹನ್‌ ಸಿಂಗ್ ರಾಷ್ಟ್ರಪತಿಯನ್ನಾಗಿಯೂ ಮಾಡಿದರೂ 2014ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುತ್ತಿತ್ತು. ಆದರೆ 44 ಸೀಟುಗಳಿಗೆ ಕುಸಿಯುವಷ್ಟು ಹೀನಾಯವಾಗಿ ಸೋಲುತ್ತಿರಲಿಲ್ಲ’ ಎಂದು ನುಡಿದಿದ್ದಾರೆ.

ಜೊತೆಗೆ ಕಳೆದ 10 ವರ್ಷದಿಂದ ಸೋನಿಯಾ ಗಾಂಧಿ, ರಾಹುಲ್ ಗಾಂದಿ ಸೇರಿದಂತೆ ಪ್ರಮುಖ ನಾಯಕರ ಭೇಟಿಯಾಗಲು ನನಗೆ ಅವಕಾಶ ನೀಡಿಲ್ಲ. 2 ಬಾರಿ ಪ್ರಿಯಾಂಕಾ ಗಾಂಧಿ ಭೇಟಿಯಾಗಲು ಅವಕಾಶ ಸಿಕ್ಕಿತ್ತು. ಪಾರ್ಟಿ ನಾಯಕರೂ ದೂರವಾಗಿದ್ದಾರೆ ಎಂದು ಅಯ್ಯರ್ ಹೇಳಿದ್ದಾರೆ.

ಪಕ್ಷ ನನ್ನನ್ನು ಉಚ್ಚಾಟನೆ ಮಾಡಿದಾಗ ಕಾರಣ ಕೇಳಿದ್ದೆ. ಇದೀಗ 10 ವರ್ಷಗಳೇ ಉರುಳಿದೆ. ಆದರೆ ಕಾರಣ ಸ್ಪಷ್ಟವಾಗಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷವನ್ನೇ ಉಸಿರಾಗಿಸಿದ್ದ ಮಣಿಶಂಕರ್ ಅಯ್ಯರ್ ಇದೀಗ ಗಾಂಧಿ ಕುಟುಂಬದಿಂದ ದೂರವಾಗಿದ್ದಾರೆ. ಇದೇ ಗಾಂಧಿ ಕುಟುಂಬ ಮಣಿಶಂಕರ್ ಅಯ್ಯರ್ ರಾಜಕೀಯದ ಆರಂಭದ ದಿನಗಳಲ್ಲಿ ನೆರವಿಗೆ ನಿಂತಿತ್ತು.

ಮಣಿಶಂಕರ್ ಅಯ್ಯರ್ ಇದೇ ವೇಳೆ ಗಾಂಧಿ ಕುಟುಂಬದ ಹೊರತಾಗಿ ಯಾರಿಗೂ ಅವಕಾಶ ನೀಡಲಿಲ್ಲ. ಸಮರ್ಥವಾಗಿ ಸರ್ಕಾರ, ಪಕ್ಷ ಮುನ್ನಡೆಸುವ ಜವಾಬ್ದಾರಿಯನ್ನು ಗಾಂಧಿ ಕುಟುಂಬ ಬಿಟ್ಟುಕೊಡಲಿಲ್ಲ ಅನ್ನೋದನ್ನು ಪರೋಕ್ಷವಾಗಿ 2012ರ ಘಟನೆ ಹೇಳುವ ಮೂಲಕ ವಿವರಿಸಿದ್ದಾರೆ.

ಸೋನಿಯಾ ಗಾಂಧಿಯೊಂದಿಗೆ ಒಂದು ಭೇಟಿಯ ಅನುಭವವನ್ನೂ ಅಯ್ಯರ್ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ‘ಒಂದು ದಿನ ಸೋನಿಯಾ ಗಾಂಧಿಯವರಿಗೆ ಕ್ರಿಸ್ಮಸ್‌ಗೆ ಶುಭಕೋರಿದ್ದೆ. ನಾನು ಕ್ರಿಶ್ಚಿಯನ್ ಅಲ್ಲ ಎಂದು ಅವರು ಹೇಳಿದ್ದರು. ಇದರಿಂದ ನಾನು ಆಶ್ಚರ್ಯಗೊಂಡಿದ್ದೆ’ ಎಂದಿದ್ದಾರೆ. ಅಲ್ಲದೇ ಅವರು ಯಾವತ್ತೂ ತನ್ನನ್ನು ತಾನು ಕ್ರಿಶ್ಚಿಯನ್ ಎಂದು ಅಂದುಕೊಂಡಿದ್ದಾಗಿ ನಾನು ಗಮನಿಸಿಲ್ಲ ಎಂದು ಅಯ್ಯರ್ ಹೇಳಿದ್ದಾರೆ.

ತಮ್ಮ ಧಾರ್ಮಿಕ ನಿಲುವುಗಳ ಬಗ್ಗೆ ಮಾತನಾಡಿರುವ ಅವರು, ‘ನಾನು ಯಾವುದೇ ಒಂದು ಧರ್ಮದ ಪರವಾಗಿ ಗುರುತಿಸಿಕೊಂಡಿಲ್ಲ. ನನಗೆ ಧರ್ಮದ ಬಗ್ಗೆ ನಂಬಿಕೆ ಇಲ್ಲ. ಅದನ್ನು ನಾನು ಮುಕ್ತವಾಗಿಯೇ ಹೇಳಿಕೊಳ್ಳುತ್ತೇನೆ. ಅದರರ್ಥ ನಾನು ಧರ್ಮಗಳನ್ನು ಗೌರವಿಸುವುದಿಲ್ಲ ಎಂದಲ್ಲ. ನಾನು ಎಲ್ಲಾ ಧರ್ಮವನ್ನೂ ಸಮಾನವಾಗಿ ಕಾಣುತ್ತೇನೆ’ ಎಂದಿದ್ದಾರೆ.

Edited By : Nirmala Aralikatti
PublicNext

PublicNext

15/12/2024 08:45 pm

Cinque Terre

37.79 K

Cinque Terre

3

ಸಂಬಂಧಿತ ಸುದ್ದಿ